Article Bollywood Gossips %e0%b2%b8%e0%b2%b2%e0%b3%8d%e0%b2%b2%e0%b3%82 %e0%b2%ac%e0%b2%b0%e0%b3%8d%e0%b2%a4%e0%b2%a1%e0%b3%87 %e0%b2%97%e0%b3%86 %e0%b2%95%e0%b2%a4%e0%b3%8d%e0%b2%b0%e0%b2%bf%e0%b2%a8%e0%b2%be %e0%b2%b9%e0%b3%8b%e0%b2%97%e0%b3%8d%e0%b2%a4%e0%b2%be%e0%b2%b3%e0%b2%be 113122300008_1.htm

Daily Horoscope

Select Your Language

Notifications

webdunia
webdunia
webdunia
webdunia

ಸಲ್ಲೂ ಬರ್ತಡೇ ಗೆ ಕತ್ರಿನಾ ಹೋಗ್ತಾಳಾ ?

ಸಲ್ಮಾನ್ ಖಾನ್
PR
ಬಾಲಿವುಡ್ ಎಂಗ್ ಬಾಯ್ ಬೈಸೆಪ್ಸ್ ಮ್ಯಾನ್ ಸಲ್ಮಾನ್ ಖಾನ್ ಹುಟ್ಟು ಹಬ್ಬ ಈ ತಿಂಗಳ 27 ನೇ ತಾರೀಖು. ಅಂದು ನಡೆಯುವ ಪಾರ್ಟಿಗೆ ಆತನ ಮಾಜಿ ಗರ್ಲ್ ಫ್ರೆಂಡ್ ಕತ್ರಿನಾ ಕೈಫ್ ಹೋಗುತ್ತಾಳ ಎನ್ನುವುದೇ ಈಗ ಬಿಟೌನ್ ಮಂದಿಯಲ್ಲಿ ಕಾಡುತ್ತಿರುವ ಪ್ರಶ್ನೆ.

ಮುಖ್ಯವಾಗಿ ಈ ಪ್ರಶ್ನೆ ಮನದಲ್ಲಿ ಬರಲು ಕಾರಣ ಕಾಟ್ ಈಗ ನಟ ರಣಬೀರ್ ಜೊತೆಯಲ್ಲಿ ಲವ್ವಿಡವ್ವಿಯಲ್ಲಿ ಬ್ಯುಸಿ. ಈಕೆಯನ್ನು ಇತ್ತೀಚೆಗಷ್ಟೆ ನಟ ಸಲ್ಮಾನ್ ಖಾನ್ ತನ್ನ ನಾದಿನಿ ಎಂದು ಸಹ ಹೇಳಿದ್ದರು.

webdunia
PR
ಪಾನ್ ವೆಲ್ ಫಾರ್ಮ್ ಹೌಸ್ ನಲ್ಲಿ ಸಲ್ಲೂ ಜನ್ಮದಿನ ನಡೆಯುತ್ತದೆ. ಅಲ್ಲಿಗೆ ಈ ಬಾರಿ ಕತ್ರಿನಾಳಿಗೂ ಆಹ್ವಾನ ಇರುವುದರಿಂದ ತಪ್ಪದೇ ಹೋಗುತ್ತಾಳೆ ಎಂದು ನಿರೀಕ್ಷಿಸಿದ್ದಾರೆ ಬಿಟೌನ್ ಮಂದಿ.

ಈ ಕಾರ್ಯಕ್ರಮಕ್ಕೆ ಅಮೀರ್ ಖಾನ್, ಕಿರಣ್ ರಾವ್, ಕರಣ್ ಜೋಹರ್, ಫರಾನ್ ಅಕ್ತರ್, ಬಿಪಾಸ ಬಸು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈಗ ಎಲ್ಲರ ಗಮನ ಕತ್ರಿನಾ ಮೇಲಿದೆ. ಅಕೆ ಆ ಪಾರ್ಟಿ ಭಾಗವಾಗುತ್ತಾಳೋ ಇಲ್ಲವೋ ಎಂದು.

ಏಕೆಂದರೆ ಇತ್ತೀಚೆಗೆ ಅಮೀರ್ ಖಾನ್ ಸಲ್ಮಾನ್ ಖಾನ್ ಜೊತೆ ಮದುವೆ ಆಗು ಎಂದು ಎಲ್ಲರ ಮುಂದೆ ಹೇಳಿ ಆಕೆಗೆ ಮುಜುಗರ ಉಂಟು ಮಾಡಿದ್ದರು. ಇದರಿಂದ ಬೇಸರ ಹೊಂದಿದ್ದ ಕತ್ರಿನಾ ಧೂಮ್ 3 ಚಿತ್ರದ ಪ್ರಮೋಷನ್ ಗೆಂದು ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಲಿಲ್ಲ. ಆದರೇ ಈಗ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾಳೆ ಎಂಬುದೇ ಸದ್ಯದ ಪ್ರಶ್ನೆ!

Share this Story:

Follow Webdunia kannada