Select Your Language

Notifications

webdunia
webdunia
webdunia
webdunia

ಸಲ್ಲುಗ್ಯಾಗೆ ಕೂಡಿಬರ್ತಿಲ್ಲ ಕಂಕಣಬಲ, ಇಲ್ಲಿವೆ ನೋಡಿ ಕಾರಣಗಳು

ಸಲ್ಮಾನ್ ಖಾನ್
, ಬುಧವಾರ, 19 ಮಾರ್ಚ್ 2014 (14:31 IST)
PR
PR
ಸಲ್ಮಾನ್ ಖಾನ್ ಏಕೆ ಮದುವೆಯಾಗ್ತಿಲ್ಲ ಎನ್ನೋಕೆ ಅನೇಕ ಕಾರಣಗಳಿವೆಯಂತೆ. ಅದರಲ್ಲಿ ಮೊದಲನೇ ಕಾರಣ ಸಲ್ಲುಮಿಯಾಗೆ ಈಗಾಗಲೇ 47 ವರ್ಷ ವಯಸ್ಸು ತುಂಬಿದೆ. ಇಷ್ಟು ವಯಸ್ಸಾದ ಮೇಲೆ ಮದುವೆ ಯಾಕೆ ಎನ್ನುವುದು ಸಲ್ಲು ಪ್ರಶ್ನೆ. ಇನ್ನೊಂದು ಇವಳೇ ನನ್ನ ಹೆಂಡತಿ ಎನಿಸುವ ಯಾವ ಹುಡುಗಿಯೂ ಸಲ್ಲುಗೆ ಸಿಕ್ಕಿಲ್ಲವಂತೆ. ಐಶ್ವರ್ಯ ರೈಯಿಂದ ಹಿಡಿದು ಕತ್ರಿನಾ ಕೈಫ್‌‌ವರೆಗೆ ಯಾರೊಬ್ಬರ ಜತೆ ಸಂಬಂಧವೂ ಮದುವೆ ತನಕ ಬರಲಿಲ್ಲವೆಂದು ಸಲ್ಲು ಹೇಳುತ್ತಾರಂತೆ. ಇನ್ನೊಂದು ಕಾರಣವೆಂದರೆ ಸಲ್ಲುಗೆ ಈಗಾಗಲೇ ಮಕ್ಕಳಿದ್ದಾರಂತೆ. ಅವು ಅವರ ಸೋದರರ ಮಕ್ಕಳು. ಸೋದರರ ಮಕ್ಕಳನ್ನೇ ತಮ್ಮ ಮಕ್ಕಳೆಂದು ಸಲ್ಲು ಅಕ್ಕರೆಯಿಂದ ನೋಡ್ತಾರೆ.

ಇನ್ನು ಮಕ್ಕಳ ಪ್ರೀತಿ ಸಿಕ್ಕಮೇಲೆ ಮತ್ಯಾಕೆ ಮದುವೆ ಎನ್ನುವುದು ಅವರ ಪ್ರಶ್ನೆ. ಹಾಗಾದರೆ ಸಲ್ಲುಮಿಯಾ ಮದುವೆಗೆ ಅಡ್ಡಿಯಾದ ಅಸಲಿ ಕಾರಣಗಳೇನು ಎನ್ನುವುದನ್ನು ನೋಡೋಣ. ಮದುವೆಯಾದ ಮಾರನೇ ದಿನವೇ ಬಣ್ಣದ ಲೋಕದ ಅದೃಷ್ಟ ಹೊರಟುಹೋಗುತ್ತೆ ಎನ್ನುವುದು ಸಲ್ಮಾನ್ ಅಂಬೋಣ. ಮದುವೆಯಾದ ಬಳಿಕ ಹೀರೋಯಿನ್‌ ತಾರಾಭವಿಷ್ಯ ಕುಂಠಿತವಾಗುವುದರಿಂದ ಮದುವೆಯನ್ನು ಮುಂದಕ್ಕೆ ಹಾಕ್ತಾರೆ. ಆದರೆ ಹೀರೋ ಪಾಲಿಗೆ ಇದು ಅನ್ವಯಿಸುವುದಿಲ್ಲ. ಸ್ಟಾರ್ ನಟರು ಕೂಡ ಲವರ್ ಬಾಯ್ ಪಾತ್ರ ಮಾಡಿ ಸೈ ಎನಿಸಿಕೊಂಡಿರುವಾಗ ಸಲ್ಲುಗ್ಯಾಕೆ ಇಷ್ಟೊಂದು ಆತಂಕ ಗೊತ್ತಿಲ್ಲ.

ಸಲ್ಮಾನ್‌ ಖಾನ್ ಮೇಲಿರೋ ಕೋರ್ಟ್ ಕೇಸ್‌ಗಳಿಂದ ಜರ್ಜರಿತನಾಗಿ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಒಂದು ದಶಕದಿಂದ ಸಲ್ಮಾನ್ ಕೋರ್ಟ್‌ಗೆ ಅಲೀತಿದ್ದಾರೆ. ಮದುವೆಯಾಗಿ ಸಂಗಾತಿಗೆ ತೊಂದರೆಕೊಡೋದು ಯಾಕೆ ಎನ್ನುವುದು ಸಲ್ಮಾನ್ ಪ್ರಶ್ನೆಯಾಗಿದೆ.

Share this Story:

Follow Webdunia kannada