ಸಲ್ಮಾನ್ ಖಾನ್ ಪ್ರಕರಣ: ಮತ್ತೆ ಮುಂದಕ್ಕೆ
Publish Date: Mon, 22 Jul 2013 (12:05 IST)
Updated Date: Mon, 22 Jul 2013 (12:04 IST)
ಸಲ್ಮಾನ್ ಖಾನ್ ಜೈಲು ವಾಸಿಯಾಗುವ ದಿನ ಮತ್ತೆ ಮುಂದಕ್ಕೆ ಹೋಗಿದೆ. ಬಾಲಿವುಡ್ ನಟ ಸಲ್ಲು ಆರೋಪಿಯಾಗಿರುವ ಪ್ರಕರಣವನ್ನು ಮುಂಬೈ ನ್ಯಾಯಾಲಯ ಜುಲೈ 24ಕ್ಕೆ ಮುಂದೂಡಿದೆ.ವಿಚಾರಣಾಧೀನ ನ್ಯಾಯಾಲಯವು ಈ ಹಿಂದೆ ನೀಡಿದ ಆದೇಶದ ಪ್ರಕಾರ ಸಲ್ಮಾನ್ ಹಾಗೂ ಅವರ ಸಂಬಂಧಿಕರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಸಂಬಂಧ ಸಲ್ಮಾನ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ 304(3)ರ ಪ್ರಕಾರ ದೋಷಾರೋಪ ಸಲ್ಲಿಸಲಾಗಿತ್ತು. ಒಂದು ವೇಳೆ ಸಲ್ಲು ಅಪರಾಧ ಸಾಬೀತಾದರೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.2002
ರಲ್ಲಿ ಈ ಪ್ರಕರಣ ನಡೆದಿತ್ತು. ತಡರಾತ್ರಿ ತಮ್ಮ ಲ್ಯಾಂಡ್ರೋವರ್ ಕಾರನ್ನು ಚಾಲನೆ ಮಾಡುತ್ತಿದ್ದ ವೇಳೆ ಸಲ್ಮಾನ್ ಖಾನ್ ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿಸಿದ್ದರು ಎಂಬುದು ಅವರ ಮೇಲೆ ದಾಖಲಾಗಿರುವ ದೂರು. ಘಟನೆಯಲ್ಲಿ ಒಬ್ಬ ಸಾವಿಗೀಡಾಗಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.