Article Bollywood Gossips %e0%b2%b8%e0%b2%b2%e0%b3%8d%e0%b2%ae%e0%b2%be%e0%b2%a8%e0%b3%8d %e0%b2%96%e0%b2%be%e0%b2%a8%e0%b3%8d %e0%b2%a8%e0%b3%80%e0%b2%b5%e0%b3%81 %e0%b2%a4%e0%b2%bf%e0%b2%b3%e0%b2%bf%e0%b2%af%e0%b2%a6 10 %e0%b2%b0%e0%b2%b9%e0%b2%b8%e0%b3%8d%e0%b2%af%e0%b2%97%e0%b2%b3%e0%b3%81 113122800003_1.htm

Daily Horoscope

Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ನೀವು ತಿಳಿಯದ 10 ರಹಸ್ಯಗಳು!

ಸಲ್ಮಾನ್ ಖಾನ್
PR
ನಿನ್ನೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 48 ನೇ ಜನ್ಮದಿನ. ಅವರ ಬದುಕಿನೊಂದಿಗೆ ಜೊತೆಯಾಗಿರುವ ಅದರಲ್ಲೂ ನಿಮಗೆ ಗೊತ್ತಿಲ್ಲದ 10 ಸತ್ಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಒಪ್ಪಿಸಿಕೊಳ್ಳಿ

ಸಲ್ಮಾನ್ ಖಾನ್ ಅತ್ಯುತ್ತಮ ಈಜುಗಾರ. ಅವರು ಶಾಲಾದಿನಗಳಲ್ಲಿ ಉತ್ತಮ ಈಜುಗಾರರಾಗಿದ್ದರು.ಅವರು ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಿಲಿಲ್ಲ. ಹಾಗೇನಾದರೂ ಆಗಿದ್ದಿದ್ದಿರೆ ಅವರು ಚಿತ್ರರಂಗದ ತಾರೆ ಆಗುತ್ತಿರಲಿಲ್ಲ!

ಸಲ್ಮಾನ್ ಖಾನ್ ಇಷ್ಟ ಪಡುವ ನಟ -ನಟಿ ಸಿಲ್ವೆಸ್ಟರ್ ಸ್ಟಲ್ಲೊನ್ ಮತ್ತು ಹೇಮ ಮಾಲಿನಿ.ಅಬ್ಬಾಸ್-ಮುಸ್ತಾನ್ ಆರಂಭದಲ್ಲಿ ಸಲ್ಮಾನ್ ಖಾನ್ ಅವರಿಗೆಬಾಜಿಗರ್ ಚಿತ್ರದಲ್ಲಿ ನಟಿಸಲು ಆಹ್ವಾನ ನೀಡಿದ್ದರಂತೆ. ಆದರೆ ಅದರಲ್ಲಿ ನೆಗೆಟಿವ್ ರೋಲ್ ಇದ್ದುದರಿಂದ ಸಲ್ಮಾನ್ ನಟಿಸಲು ಇಷ್ಟಪಡಲಿಲ್ಲವಂತೆ.ಸಲ್ಮಾನ್ ಶೂಗಳಿಗೆ ರಾಯಬಾರಿ ಆಗಿದ್ದಾರೆ ಬಹು ಕಾಲದಿಂದ.ಆದರೇ ಅವರಿಗೆ ಬರಿಗಾಲಲ್ಲಿ ನಡೆಯುವುದಕ್ಕೆ ಹೆಚ್ಚು ಇಷ್ಟವಂತೆ!

webdunia
PR
ಸಾಮಾನ್ಯವಾಗಿ ಸಲ್ಮಾನ್ ಹೆಚ್ಚಾಗಿ ಒಂದು ಲೋಹದ ಬ್ರೇಸ್ ಲೆಟ್ ಹಾಕಿರುತ್ತಾರೆ. ಅಂತಹದ್ದೇ ಅವರ ತಂದೆ ಸಲೀಂ ಖಾನ್ ಸಹ ಧರಿಸಿರುತ್ತಾರೆ. ಇದು ಅವರ ಅದೃಷ್ಟದಾಯಕ ಬ್ರೇಸ್ ಲೆಟ್ ಎಂದು ನಂಬಿದ್ದಾರೆ ಸಲ್ಮಾನ್ ಖಾನ್.

ಇವರಿಗೆಂದು ಮುಂಬೈನಿಂದ ಬಿರಿಯಾನಿ ಲಂಡನ್ ಗೆ ಬರುತ್ತಿತಂತೆ. ಖಾನ್ ಸಾಹೇಬರಿಗೆ ಕಾಂಟಿನೆಂಟಲ್ ಆಹಾರ ತಿಂದು ತಲೆ ಕೆಟ್ಟಿತಂತೆ ಲಂಡನ್ ಡ್ರೀಮ್ಸ್ ಸಮಯದಲ್ಲಿ!

ಈ ನಟನಿಗೆ ಮರ್ಸಿಡೈಸ್ ಬೆಂಜ್,ಬಿಎಂಡಬ್ಲ್ಯು ಲ್ಯಾಂಡ್ ಕ್ರೈಸೆರ್ ನಲ್ಲಿ ಡ್ರೈವ್ ಮಾಡೋಕೆ ಹೆಚ್ಚು ಇಷ್ಟ. ಸಲ್ಮಾನ್ ಗೆ ಚೈನೀಸ್ ಫುಡ್ ಅಂದ್ರೆ ತುಂಬಾ ಇಷ್ಟ. ಅವರು ಮುಂಬೈನಲ್ಲಿರುವ ಚೈನಾ ಗಾರ್ಡೆನ್ ಗೆ ಹೆಚ್ಚು ಭೇಟಿ ನೀಡುತ್ತಿರುತ್ತಾರಂತೆ.

ಸಲ್ಮಾನ್ ಖಾನ್ ಗೆ ಹೂವು ಹಣ್ಣಿಂದ ಮಾಡಿರುವ ಸೋಪುಗಳನ್ನು ಸ್ನಾನಕ್ಕೆ ಬಳಸಲು ಇಷ್ಟವಂತೆ.

ಮುಸ್ಲಿಂ ಸಂಘಟನೆಗಳು ಎರಡು ವಿಷಯಕ್ಕೆ ಫತ್ವಾ ಹೊರಡಿಸಿದೆ. ಒಂದು ಅವರು ಮ್ಯಾಡಂ ತುಸ್ಸಾಡ್ಸ್ ವ್ಯಾಕ್ಸ್ ಮ್ಯೂಜಿಯಂ ನಲ್ಲಿನ ಪ್ರತಿಮೆಗೆ ಸಂಬಂಧಿಸಿದಂತೆ,ಇನ್ನೊಂದು ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ

Share this Story:

Follow Webdunia kannada