ಸಲ್ಮಾನ್ ಖಾನ್ ಜೊತೆ ನಟಿಸ್ತಿದ್ದಾಳೆ ಗೋವಾ ಚೆಲುವೆ ಇಲಿಯಾನ
, ಶನಿವಾರ, 5 ಏಪ್ರಿಲ್ 2014 (09:57 IST)
ಗೋವಾ ಸುಂದರಿ ಇಲಿಯಾನ ಕಾಲ ಎಂದೇ ಹೇಳ ಬಹುದು. ಈಗ ಇಲಿಯಾನ ಹೆಸರು ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ ಬಾಲಿವುಡ್ ನಲ್ಲಿ. ಅಲ್ಲಿ ಆಕೆ ಗಾಸಿಪ್ ಜೊತೆ ಜೊತೆಗೆ ಒಳ್ಳೆಯ ಅವಕಾಶಗಳನ್ನು ಸಹಿತ ತನ್ನದಾಗಿಸಿಕೊಳ್ಳು ತ್ತಿದ್ದಾಳೆ.ಸದ್ಯದ ಸುದ್ದಿ ಏನೆಂದರೆ ಆಕೆ ಈಗ ಸಲ್ಮಾನ್ ಖಾನ್ ಜೊತೆ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಸೂರಜ್ ಬರ್ಜಾತ್ಯ ಅವರ ಚಿತ್ರದಲ್ಲಿ ಈಕೆಗೆ ಅವಕಾಶ ಸಿಕ್ಕಿದೆ. ಕೌಟುಂಬಿಕ ಕಥೆಯನ್ನು ಆಧರಿಸಿದ ಚಿತ್ರವನ್ನು ನಿರ್ಮಿಸುವುದರಲ್ಲಿ ಸೂರಜ್ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಅವರ ಚಿತ್ರದಲ್ಲಿ ಈಗ ನಟಿಸುವ ಅವಕಾಶ ಸಿಕ್ಕಿದೆ ಇಲಿಯಾನಾಳಿಗೆ. ಆ ಪಾತ್ರವು ಕರೀನ ಕೈಲಿ ಮಾಡಿಸುವ ಉದ್ದೇಶ ಹೊಂದಿದ್ದರಂತೆ ಸೂರಜ್ . ಆದರೆ ಕಾರಣಾಂತರಗಳಿಂದ ಅದರಲ್ಲಿ ಆಕೆ ನಟಿಸದೆ ಇರುವುದರಿಂದ ಈಗ ಸಲ್ಲು ಮಿಯ್ಯ ಜೊತೆ ಅಭಿನಯಿಸುವಂತಹ ಅವಕಾಶ ಇಲಿಯಾನಳಿಗೆ ದೊರೆತಿದೆ.
ಈಗಾಗಲೇ ಇಲಿಯು ಬರ್ಫಿ, ಫಟ ಪೋಸ್ಟರ್ ನಿಕ್ಲ, ಅಲ್ಲದೆ ಸೈಫ್ ಅಲಿ ಖಾನ್ ಜೊತೆ ಹ್ಯಾಪಿ ಎಂಡಿಂಗ್, ವರುಣ್ ಧವನ್ ಜೊತೆಯಲ್ಲಿ ಮೈ ತೇರ ಹೀರೋ ಚಿತ್ರಗಳಲ್ಲೂ ನಟಿಸಿದ್ದಾಳೆ. ಈಗ ಸಲ್ಮಾನ್ ಜೊತೆ ನಟಿಸುವ ಅವಕಾಶ ದೊರೆತದಕ್ಕೆ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ. ಈ ಚಿತ್ರದಲ್ಲಿ ನಟಿಸುವುದು ಅತ್ಯಂತ ಗೌರವಾನ್ವಿತ ಕೆಲಸ ಆಗಿದೆ ಎಂದು ಈ ಸಮಯದಲ್ಲಿ ತಿಳಿಸಿದ್ದಾಳೆ .ಸಲ್ಮಾನ್ ಖಾನ್ ಹಾಗೂ ಸೂರಜ್ ಕಾಂಬಿನೇಶನ್ ನಲ್ಲಿ ಈವರೆಗೂ ಬಿಡುಗಡೆ ಆದ ಮೈನೆ ಪ್ಯಾರ್ ಕಿಯ, ಹಮ್ ಆಪ್ಕೆ ಹಾಯ್ ಕೌನ್, ಹಮ್ ಸಾಥ್ ಸಾಥ್ ಚಿತ್ರಗಳು ಸಂಪೂರ್ಣವಾದ ಯಶಸ್ಸು ಗಳಿಸಿತ್ತು. ಈಗ ಈ ಕಾಂಬಿನೇಶನ್ ನಲ್ಲಿ ತಯಾರಾಗುತ್ತಿರುವ ಹೊಚ್ಚ ಹೊಸ ಚಿತ್ರವೂ ಸಹಿತ ಹೆಚ್ಚು ಯಶಸ್ಸು ತನ್ನದಾಗಿಸಿಗಿಸಿಕೊಳ್ಳುತ್ತದೆ ಎನ್ನುವ ಮಾತು ಬಾಲಿವುಡ್ ಎಲ್ಲಡೆ ಕೇಳಿ ಬರುತ್ತಿದೆ.