Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಏನು ಮಾತಾಡ್ತಾ ಇದ್ದೀನಿ ಅಂತ ಅವರಿಗೆ ಗೊತ್ತಿರಲ್ಲ- ಕರಣ್ ಜೋಹರ್ !

ಕಾಫಿ ವಿತ್ ಕರಣ್
, ಗುರುವಾರ, 16 ಜನವರಿ 2014 (12:11 IST)
PR
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮಾತುಗಳನ್ನು ಕೇಳಿ ಮೂಕರಾಗುವ ಸ್ಥಿತಿ ಎದುರಾಗಿತ್ತಂತೆ ಪ್ರೆಸೆಂಟರ್ ಕರಣ್ ಜೋಹರ್ ಗೆ!ತಾವು ಕೇಳಿದ ಪ್ರಶ್ನೆಗಳಿಗೆ ಹಾಯಾಗಿ ಉತ್ತರಿಸುತ್ತಾ, ತಮಾಷೆಯಾಗಿ ಮಾತನಾಡಿದರಂತೆ ಸಲ್ಲೂ!
ಈ ಕಾರ್ಯಕ್ರಮದಲ್ಲಿ ಸಲ್ಮಾನ್ ತಾನು ವರ್ಜಿನ್ ಎಂದು ಹೇಳಿದ್ದರು. ಅದು ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಅದಾದ ಬಳಿಕ ಆ ಸಂಗತಿ ಹೆಚ್ಚು ಜನರ ಮಾತಾಡಿಕೊಳ್ಳುವಂತೆ ಆಗಿತ್ತು. ಆದರೇ ಆ ಮತ್ತು ತಮಾಷೆಗೆ ಹೇಳಿದ್ದು ಎಂಬುದನ್ನು ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಕೆಲವು ಬಾರಿ ಸಲ್ಮಾನ್ ಹಾಸ್ಯದಿಂದ ಮಾತಾಡುವಾಗ ತಾವೇನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಕೊಡಲ್ಲ.. ವಾತಾವರಣವನ್ನು ತಿಳಿಯಾಗಿಡುವ ಕೆಲಸ ಮಾಡುತ್ತಾರೆ. ಅವರೊಂದಿಗೆ ಮಾತನಾಡುವಾಗ ಖುಷಿ ಆಗುತ್ತದೆ ಎಂದಿದ್ದಾರೆ.

ಕಳೆದ ವರ್ಷದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ದಂಪತಿಗಳಿಂದ ಆರಂಭವಾಗಿತ್ತು. ಈ ಬಾರಿ ಸಲ್ಮಾನ್ ಖಾನ್ ಆರಂಭದ ಶೋನಲ್ಲಿ ಭಾಗವಹಿಸಿದ್ದರು. ಅಂದು ಸಲ್ಮಾನ್ ಜೊತೆ ಶಾರುಖ್ ಸಹ ಮಾತನಾಡಿದ್ದರು. ಸಲ್ಮಾನ್ ಅವರ ಮತ್ತೊಬ್ಬ ಗೆಳೆಯ ಅಮೀರ್ ಖಾನ್ ಅವರ ಷೋ ನಡೆಯುತ್ತದೆ. ಅದರಲ್ಲಿ ಈ ಗೆಳೆಯರೊಂದಿಗೆ ಮಾತಾಡುವ ಖುಷಿ ತನಗೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ ಕರಣ್.

Share this Story:

Follow Webdunia kannada