ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ದಕ್ಷಿಣದ ಸುಂದರಿ ಆಸಿನ್ ನಡುವೆ ಏನೋ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ತಾನೇ. ಮೊನ್ನೆ ಮೊನ್ನೆ ಸಲ್ಮಾನ್ ತನ್ನ ಪ್ರೇಯಸಿ(?)ಗಾಗಿ ಮುಂಬೈಯಲ್ಲಿ ಮನೆಯೊಂದನ್ನು ಖರೀದಿಸಿದ್ದಾನೆ ಎಂದು ಸುದ್ದಿಯಾಗಿತ್ತು. ಅದನ್ನೇ ಆಕೆಯಲ್ಲಿ ಕೇಳಿದಾಗ ಉರಿದು ಬಿದ್ದಿದ್ದಲ್ಲದೆ, "ನಾನು ಆತನನ್ನು ಭೇಟಿಯೇ ಆಗಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ನಿಮಗೆ ಮಾಡೋದಿಕ್ಕೆ ಬೇರೇನೂ ಕೆಲಸ ಇಲ್ವಾ?" ಎಂದು ಉತ್ತರಿಸುವ ಬದಲು ಖಾರವಾಗಿ ಪ್ರಶ್ನಿಸಿದ್ದಾಳೆ.