Article Bollywood Gossips %e0%b2%b8%e0%b2%b0%e0%b3%8d%e0%b2%b5%e0%b2%82 %e0%b2%b0%e0%b2%9c%e0%b2%a8%e0%b2%bf%e0%b2%95%e0%b2%be%e0%b2%82%e0%b2%a4%e0%b3%8d%e2%80%8c %e0%b2%ae%e0%b2%af%e0%b2%82 108071500049_1.htm

Daily Horoscope

Select Your Language

Notifications

webdunia
webdunia
webdunia
webdunia

ಸರ್ವಂ ರಜನಿಕಾಂತ್‌ ಮಯಂ

ರಜನಿಕಾಂತ್
WD
ಸೂಪರ್ ಸ್ಟಾರ್ ರಜನಿಕಾಂತ್ 'ಕುಸೇಲನ್' ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಕೆಲವೇ ನಿಮಿಷಗಳು ಮಾತ್ರ, ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ ಮತ್ತು ಪ್ರಚಾರದಲ್ಲಿ ಅವರೇ ಸರ್ವವ್ಯಾಪಿ.

ಸಿನಿಮಾದಲ್ಲಿ ನಿಮಿಷದ ಮಟ್ಟಿಗಾದರೂ ರಜನಿಕಾಂತ್‌ರ ಇರುವಿಕೆ ಗಲ್ಲಾಪೆಟ್ಟಿಗೆಯನ್ನು ತುಂಬಿ ತುಳುಕಿಸ ಬಲ್ಲದು. ಅದಕ್ಕೆಂದೆ ಕುಸೇಲನ್ ನಿರ್ಮಾಪಕರು ಅವರ ವರ್ಚಸ್ಸನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸರ್ವ ಸನ್ನದ್ಧರಾಗಿದ್ದಾರೆ. ಈ ಉತ್ಪ್ರೇಕ್ಷಿತ ಪ್ರಚಾರ ತನ್ನಲ್ಲಿ ನರ್ವಸ್ ಉಂಟು ಮಾಡಿದೆ ಎನ್ನುವ ರಜನಿಕಾಂತ್, ಚಿತ್ರದಲ್ಲಿ ತಾವು ಕಿರುಪಾತ್ರವನ್ನಷ್ಟೆ ನಿರ್ವಹಿಸುತ್ತಿರುವುದರಿಂದ ಇದನ್ನು ಜನ ತನ್ನ ಚಿತ್ರವೆಂದು ಕರೆಯಬಾರದು ಎಂದು ಕೇಳಿಕೊಂಡಿದ್ದಾರೆ.

"ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಗಳು ಹುಟ್ಟಿಕೊಂಡಿವೆ. ಚಿತ್ರ ಬೆಳ್ಳಿಹಬ್ಬ ಆಚರಿಸುತ್ತದೆ ಎಂಬುದಾಗಿ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿರುವುದರಿಂದ ನಾನು ಬಹಳ ಸಂಕೋಚಗೊಂಡಿದ್ದೇನೆ," ಎಂದು ಅವರು ಹೇಳಿದ್ದಾರೆ.

ಚಿತ್ರ ನಿರ್ಮಾಪಕರ ಪಾಲಿಗೆ ರಜನಿ ಚಿತ್ರದಲ್ಲಿ ಕಾಣಿಸಿಕೊಂಡರೆ ಸಾಕು ಜಾಕ್‌ಪಾಟ್ ಸಿಕ್ಕಿದಂತೆ. ಹಂಚಿಕೆದಾರರು ಕುಸೇಲನ್ ಅನ್ನು 'ರಜನಿಕಾಂತ್ ಚಿತ್ರ'ವೆಂದು 64 ಕೋಟಿಗೆ ಮಾರಾಟ ಮಾಡಿದ್ದಾರೆ, ಇದು ಸೂಪರ್ ಸ್ಟಾರ್ ರಜನಿ ಅವರ 'ಶಿವಾಜಿ' ಚಿತ್ರದ ಮಾರಟ ದರಕ್ಕಿಂತಲೂ ಹೆಚ್ಚು..!

ಸೂಪರ್ ಸ್ಟಾರ್‌ರ, ಸ್ಟಾರ್‌ಗಿರಿಯನ್ನು ನಗದು ಮಾಡಿಕೊಳ್ಳುವ ಹಂಚಿಕೆದಾರರ ಹೊಂಚಿಕೆ ಫಲಕೊಟ್ಟಿದೆ..

Share this Story:

Follow Webdunia kannada