Article Bollywood Gossips %e0%b2%b8%e0%b2%b0%e0%b2%b3 %e0%b2%86%e0%b2%b9%e0%b2%be%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%86 %e0%b2%b8%e0%b3%8c%e0%b2%82%e0%b2%a6%e0%b2%b0%e0%b3%8d%e0%b2%af%e0%b2%a6 %e0%b2%92%e0%b2%b3%e0%b2%97%e0%b3%81%e0%b2%9f%e0%b3%8d%e0%b2%9f%e0%b3%81 113073100003_1.htm

Daily Horoscope

Select Your Language

Notifications

webdunia
webdunia
webdunia
webdunia

ಸರಳ ಆಹಾರದಲ್ಲಿದೆ ಸೌಂದರ್ಯದ ಒಳಗುಟ್ಟು

ಝೀರೋ ಸೈಜ್
PTI
ಝೀರೋ ಸೈಜ್ ಅನ್ನುವ ಕಾನ್ಸೆಪ್ಟ್ ಅನ್ನು ಯಾರು ಕಂಡುಹಿಡಿದರೋ ಗೊತ್ತಿಲ್ಲ. ನಾನು ಈವರೆಗೆ ಝೀರೋ ಸೈಜ್ನ ಬೆನ್ನತ್ತಿ ಹೋದವಳಲ್ಲ. ಒಂದು ಬಾರಿ ಮಾತ್ರ ತಶಾನ್ ಚಿತ್ರಕ್ಕಾಗಿ ನಾನು ಸಣ್ಣಗಾಗಿದ್ದೆ ಅಷ್ಟೇ.

ಬೆಬೊ ಖ್ಯಾತಿಯ ಕರೀನಾ ಕಪೂರ್ ನೀಡಿದ ಹೇಳಿಕೆಯಿದು. ದೇಹ ಸೌಂದರ್ಯ ಕಾಪಾಡಿಕೊಳ್ಳಲು ಸದಾ ಜ್ಯೂಸ್, ಹಣ್ಣು ಹಂಪಲುಗಳನ್ನೇ ತಿಂದು ಬದುಕುತ್ತಿರುವ ನಟ ನಟಿಯರಿಗೆ ಕರೀನಾ ಕಿವಿಮಾತು ಹೇಳಿದ್ದಾರೆ. ನಾನು ಯಾವಾಗಲೂ ಸರಳ ಭಾರತೀಯ ಆಹಾರಗಳನ್ನೇ ಸೇವಿಸುತ್ತೇನೆ ಎಂದು ಹೇಳುವ ಮೂಲಕ ಸಣ್ಣಗಾಗಲು ಎಂದೂ ಪ್ರಯತ್ನಿಸಿದ್ದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಭಾರತದ ಸರಳ ಆಹಾರಗಳಾದ ಸಬ್ಜಿ ರೋಟಿ, ದಾಲ್, ಚಾವಲ್ ಹಾಗೂ ತುಪ್ಪ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹಾಗೂ ದೇಹರಚನೆ ಹೊಂದಲು ಸಾಧ್ಯವಾಗಿದೆ. 82 ವರ್ಷದ ನನ್ನ ಅಜ್ಜಿ ಈಗಲೂ ಆರೋಗ್ಯವಂತರಾಗಿ ಕಾಣಿಸಲು ಇದೇ ಆಹಾರ ಕಾರಣ ಎಂದಿದ್ದಾರೆ. ಜಂಕ್ಫುಡ್ ತಿಂದು ಜಿಮ್ಗೆ ಹೋಗಿ ಕರಗಿಸುವುದಕ್ಕಿಂತ ಸಿಂಪಲ್ ಫುಡ್ ತಿಂದು ಆರೋಗ್ಯವಂತರಾಗಿರಬಹುದು ಎಂದೂ ಅವರು ಹೇಳಿದ್ದಾರೆ.

ನಿತ್ಯ ಬೆಳಿಗ್ಗೆ ಕಾಫಿ ಬದಲು ಬಾಳೆ ಹಣ್ಣಿನ ಜ್ಯೂಸ್ ಸೇವಿಸುವ ಮೂಲಕ ದಿನ ಆರಂಭಿಸುತ್ತೇನೆ. ತಶಾನ್ ಚಿತ್ರಕ್ಕಾಗಿ ನಾನು ಸಣ್ಣಗಾಗಬೇಕಾದಾಗಲೂ ನ್ಯೂಟ್ರಿಶನಿಸ್ಟ್ ರುಜುತಾ ಸೂಚನೆಗಳ ಮೇಲೆ ದೇಹ ಸೌಂದರ್ಯ ಕಾಪಾಡಿಕೊಂಡು ಕಡಿಮೆ ಕ್ಯಾಲೊರಿ ಆಹಾರಗಳನ್ನು ಸೇವಿಸಿದ್ದೆ. ನಾನು ಯಾವಾಗಲೂ ಸಸ್ಯಾಹಾರಿಯಾಗಿದ್ದು ಹೊರಗೆ ಊಟ ಮಾಡುವುದಾದರೆ ದಾಲ್ ಇಲ್ಲವೇ ಪನೀರ್ ಸೇವಿಸುತ್ತೇನೆ. ಹಿರಿಯ ನಟಿ ಮಧುಬಾಲಾ ಮತ್ತಿತರರು ಸಿಂಪಲ್ ಫುಡ್ ತಿಂದೇ ತಮ್ಮ ಬ್ಯೂಟಿ ಕಾಪಾಡಿಕೊಂಡಿದ್ದರು ಎಂಬುದು ಕರೀನಾ ಕಪೂರ್ ಅವರ ಉವಾಚ.

Share this Story:

Follow Webdunia kannada