ಸಮುದ್ರಮಧ್ಯೆ ಸಾಹಸದಲ್ಲಿ ಸುಷ್ಮಿತಾ ಸೆನ್
Publish Date: Sun, 10 Jun 2007 (13:47 IST)
Updated Date: Sun, 10 Jun 2007 (13:46 IST)
ಬಾಲಿವುಡ್ ಬೆಡಗಿ ಸುಷ್ಮಿತಾ ಸೆನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಎನ್‌ಡಿಟಿವಿ ಕಾರ್ಯಕ್ರಮ 'ಜೈ ಜವಾನ್' ಗಾಗಿ ಆಕೆ ಭಾರತೀಯ ನೌಕಾದಳದೊಂದಿಗೆ ಅರಬಿ ಸಮುದ್ರದ ಜಲರಾಶಿಯ ಮಧ್ಯೆ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿ ಮರಳಿದ್ದಾರೆ.ಆಕೆ ಬರಿಗೈಯಲ್ಲಿ ಬರಳಿಲ್ಲ. ಕಾರ್ಯಕ್ರಮ ನಡೆಸಿ ವಾಪಸಾಗುವ ವೇಳೆ ನೌಕಾಪಡೆಯಲ್ಲಿರುವ ಸೈನಕರು ನೀಡಿದ ಸಂದೇಶಗಳನ್ನು ಆಯಾ ಮನೆಮಂದಿಗೆ ನೀಡುವ ಹೃದಯಸ್ಪರ್ಷಿ ಹೊಣೆಗಾರಿಕೆಯನ್ನೂ ಆಕೆ ವಹಿಸಿಕೊಂಡರು.ದಡದಿಂದ ಸುಮಾರು 100 ನಾಟಿಕಲ್ ಮೈಲು ಸಮುದ್ರ ಮಧ್ಯೆ ನೌಕಾಪಡೆಯ ತಂಡದೊಂದಿಗೆ ಯದ್ಧನೌಕೆಗಳ ಮಧ್ಯೆ ತಂತಿ ಸಂಚಾರ, ಹಗ್ಗಜಗ್ಗಾಟ ಬಲಪ್ರದರ್ಶನ, ವರ್ಣರಂಜಿತ ವೇದಿಕೆ ಕಾರ್ಯಕ್ರಮ, ಹಾಡು ಕುಣಿತ ಇತ್ಯಾದಿಗಳನನು ಟಿವಿಗಾಗಿ ನಡೆಸಿಕೊಟ್ಟರು.ಐಎನ್‌ಎಸ್ ವಿರಾಟ್ ನೌಕೆಯಲ್ಲಿ ಸಂಚರಿಸುವ ಮೊದಲು ನೇವಿ ಹೆಲಿಕಾಫ್ಟರ್ ಮೂಲಕ ಹಾರಿದರು. ವಿರಾಟ್ ಹಡಗನಲ್ಲಿ ಕ್ಯಾಪ್ಟನ್‌ನೊಂದಿಗೆ ಸ್ಟಿಯರಿಂಗ್ ತಿರುಗಿಸಿದರು. ಈ ಹಂತದಲ್ಲಿ ನೌಕಾದಳದ ಆಕಾಶಕಸರತ್ತನ್ನು ವೀಕ್ಷಿಸಿದರು. ಈ ಪಂತದಲ್ಲಿ ಜಾಕ‌್‌ಸ್ಟೇ ಕಾರ್ಯಕ್ರಮಕ್ಕಾಗಿ ಹಗ್ಗದ ಮೂಲಕ ಒಂದು ವಿರಾಟ್‌ನಿಂದ ಐಎನ್‌ಎಸ್ ಬೀಸ್‌ಗೆ ಸಂಚರಿಸಿದರು.ಆ ಬಳಿಕ ಜಾಗತಿಕ ಮಿಲಿಟರಿ ಪಂದ್ಯಾಟದ ಮಸ್ಕತ್ ಅಧಿಕಾರಿ ಬ್ರೇವೊ ಅವರನ್ನು ಭೇಟಿಯಾದ ಸುಷ್ಮಿತಾ, ಅಲ್ಲಿ ಮಿಲಿಟರಿ ತಂಡ ಹಾಗೂ ತಮ್ಮ ತಂಡದೊಂದಿಗೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಸಿ ಗೆಲುವು ಸಾಧಿಸಿದರು.ಹಡಗಿನ ಡೆಕ್‌ನಲ್ಲಿರುವ 'ಹ್ಯಾಂಗರ್'(ಹೆಲಿಕಾಫ್ಟರ್ ಪಾರ್ಕಿಂಗ್ ಜಾಗ)ನಲ್ಲಿ ಜರುಗಿದ ಮನಮರಂಜನಾ ಕಾರ್ಯಕ್ರಮದಲ್ಲಿ ಮನೋಜ್ಞ ಹಾಡು ಗಾಯನ ನೀಡಿದರು. ಫಿಝಾ ಚಿತ್ರದ 'ಮೆಹಬೂಬ್ ಮೇರೆ..' ಗಾಯನ ಎಲ್ಲರನ್ನೂ ರಂಜಿಸಿತು. ಕೆಲಕಾಲ ತನ್ನೆಲ್ಲಾ ಬ್ಯುಸಿ ಕಾರ್ಯಕ್ರಮಗಳನ್ನು ಬದಿಗಿರಿಸಿ ದೇಶದ ಕಾವಲು ಭಟರೊಂದಿಗೆ ಕಳೆದ ಬಾಲಿಬಾಲೆ ಇದೀಗ ಸೈನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.