Article Bollywood Gossips %e0%b2%b8%e0%b2%ae%e0%b2%be%e0%b2%9c%e0%b2%b8%e0%b3%87%e0%b2%b5%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf %e0%b2%89%e0%b2%a4%e0%b3%8d%e0%b2%b8%e0%b3%81%e0%b2%95%e0%b2%b0%e0%b2%be%e0%b2%a6 %e0%b2%9c%e0%b2%be%e0%b2%a8%e0%b3%8d 107121700012_1.htm

Daily Horoscope

Select Your Language

Notifications

webdunia
webdunia
webdunia
webdunia

ಸಮಾಜಸೇವೆಯಲ್ಲಿ ಉತ್ಸುಕರಾದ ಜಾನ್

ಸಮಾಜಸೇವೆಯಲ್ಲಿ
ಎಲ್ಲರಿಗೂ ತಿಳಿದಿರುವ ಹಾಗೆ ಜಾನ್ ಅಬ್ರಹಾಂ ಒಬ್ಬ ಉತ್ತಮ ಮಾಡೆಲ್, ನಟ ಹಾಗೂ ಚಿರಯೌವನದ ಹುರುಪಿನ ವ್ಯಕ್ತಿ. ಆದರೆ ಇಂದು 35ನೇ ವರ್ಷಕ್ಕೆ ಕಾಲಿಡುತ್ತಿರುವ ಜಾನ್ ಅಬ್ರಹಾಂ ಕುರಿತು ನಾವು ತಿಳಿಯಬೇಕಾದ ಅನೇಕ ಸಂಗತಿಗಳಿಗೆ.

ಈ 'ಯೂತ್ ಐಕಾನ್' ಸಮಾಜಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ತಾನು ನಿರ್ವಹಿಸುತ್ತಿರುವ 'ಹ್ಯಾಬಿಟೇಟ್ ಫಾರ್ ಹ್ಯುಮಾನಿಟಿ ಬ್ರಿಗೇಡ್'ನಲ್ಲಿ ಹೆಚ್ಚಿನ ಯುವಕರು ಇದರಲ್ಲಿ ಭಾಗಿಯಾಗಬೇಕೆಂಬುದು ಜಾನ್ ಅವರ ಬಯಕೆಯಾಗಿದೆ.

ಒಂದು ಚಿತ್ರದ ನಂತರ ಇನ್ನೊಂದು ಚಿತ್ರದ ನಡುವೆ ವಿರಾಮ ನೀಡಿ ಆ ಸಮಯದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತೇನೆ. ನಾನು ಪ್ರಾಣಿಪ್ರಿಯನಾಗಿದ್ದು, ಪ್ರಾಣಿಗಳ ಕ್ಷೇಮಕ್ಕಾಗಿ ಕೆಲಸಮಾಡುತ್ತೇನೆ. ಅನುಕಂಪ ನಿವಾಸ ಬ್ರಿಗೇಡುಗಳು ಎಂಬ ಸ್ವಂತ ಬ್ರಿಗೇಡನ್ನು ಹೊಂದಿದ್ದೇನೆ ಎಂದು ಜಾನ್ ಪತ್ರಕರ್ತರಿಗೆ ಹೇಳಿದ್ದಾರೆ.

ಈ ವರ್ಷ ನಾವು ಭಾರತದಾದ್ಯಂತ ನಿರ್ಗತಿಕ ಗ್ರಾಮಗಳಲ್ಲಿ 5,000 ಮನೆಗಳನ್ನು ನಿರ್ಮಿಸಿದ್ದೇವೆ. ಮುಂದಿನ ವರ್ಷ 8,000 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದೇವೆ. ಹ್ಯಾಬಿಟ್ ಆಫ್ ಹ್ಯುಮಾನಿಟಿ ಜಿಮ್ಮಿ ಕಾರ್ಟರ್ ಫೌಂಡೇಶನ್ ಅವರ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಈ ವಿಷಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದರೆ ಈಗ ನನ್ನ ಈ ಕಾರ್ಯದ ಕುರಿತು ಜನರಿಗೆ ತಿಳಿಸಬೇಕಾಗಿದೆ ಯಾಕೆಂದರೆ ಹದಿಹರೆಯದವರು ಇದರಲ್ಲಿ ಸೇರ್ಪಡೆಗೊಳ್ಳಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada