Publish Date: Thu, 26 Jul 2007 (10:56 IST)
Updated Date: Thu, 26 Jul 2007 (10:55 IST)
ಅಪ್ನೆ ಸಿನಿಮಾದ ಯಶಸ್ಸಿನಿಂದ ಉತ್ಸಾಹದಲ್ಲಿರುವ ಕಥೆಗಾರ ನೀರಜ್ ಪಾಟಕ್ ಇದೀಗ ನಿರ್ದೇಶನದತ್ತ ಆಸಕ್ತರಾಗಿದ್ದಾರೆ. ಇದಕ್ಕಾಗಿ ಹೊಸ ಆವಿಷ್ಕಾರಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ತಾವು ತೆರೆಗಿಳಿಸಲಿರುವ ಹೊಸ ಚಿತ್ರ ಒಂದು ಥ್ರಿಲ್ಲರ್ ಆಗಿರುತ್ತದೆ ಎಂಬ ಸೂಚನೆಯನ್ನಷ್ಟೇ ಅವರು ನೀಡಿದ್ದಾರೆ. ಚಿತ್ರ ನಿರ್ಮಾಣಕ್ಕಾಗಿ ಐಕಾನ್ ಪಿಕ್ಚರ್ಸ್ ಪ್ರೈ ಲಿ. ಎಂಬ ಸಂಸ್ಥೆಯನ್ನೂ ಆರಂಭಿಸಿದ್ದಾರೆ.
ಹೊಸ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕರಾಗಿರುತ್ತಾರೆ ಎಂಬುದನ್ನು ನೀರಜ್ ಘೋಷಿಸಿ ಆಗಿದೆ. ಸೆಪ್ಟೆಂಬರ್ ಮೊದಲವಾರದಿಂದ ಚಿತ್ರೀಕರಣ ಆರಂಭಿಸುವ ಯೋಜನೆಯಿದೆ ಎನ್ನುತ್ತಾರೆ ನೀರಜ್.
ನವೆಂಬರ್ ವೇಳೆಗೆ ಚಿತ್ರ ಸಿದ್ಧವಾಗಲಿದೆ. ಇದರೊಂದಿಗೆ ಚಿತ್ರದ ಶೀರ್ಷಿಕೆ, ಇತರ ತಾರಾಗಣಗಳ ಯಾದಿಯೂ ಸಿದ್ಧವಾಗಲಿದೆ ಎಂಬುದು ಅವರ ಹೇಳಿಕೆ.