Article Bollywood Gossips %e0%b2%b8%e0%b2%a6%e0%b3%8d%e0%b2%af%e0%b2%b5%e0%b3%87 %e0%b2%9a%e0%b3%86%e0%b2%b2%e0%b3%81%e0%b2%b5%e0%b3%86%e0%b2%af%e0%b3%87 %e0%b2%a8%e0%b2%bf%e0%b2%a8%e0%b3%8d%e0%b2%a8%e0%b3%87 %e0%b2%a8%e0%b3%8b%e0%b2%a1%e0%b3%81%e0%b2%b5%e0%b3%87 108042500009_1.htm

Daily Horoscope

Select Your Language

Notifications

webdunia
webdunia
webdunia
webdunia

ಸದ್ಯವೇ, ಚೆಲುವೆಯೇ ನಿನ್ನೇ ನೋಡುವೇ

ವಿಶ್ವದ ಏಳು ಆದ್ಬುತ
ವಿಶ್ವದ ಏಳು ಆದ್ಬುತಗಳು ಒಟ್ಟಾಗಿ ಕಣ್ಣ ಮುಂದೆ ಬಂದರೆ ಅದನ್ನು ನೋಡುವುದೇ ಒಂದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಇಂತಹ ಒಂದು ಪ್ರಯೋಗ ನಡೆಯುತ್ತಿದೆ. ಸದ್ಯದಲ್ಲೇ ವಿಶ್ವದ ಏಳು ಅದ್ಬುತಗಳನ್ನೊಳಗೊಂಡ ಚೆಲುವೆಯೇ ನಿನ್ನೇ ನೋಡುವೇ ಚಿತ್ರ ಬರುತ್ತಿದೆ.

ಅಂದಹಾಗೆ ಈ ಚಿತ್ರದಲ್ಲಿ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಲಿದ್ದಾರೆ. ಚಿತ್ರವನ್ನು ರಘು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ನಿರ್ಮಿಸುವ ಪಿ9 ಸಂಸ್ಥೆಯ ನಿರ್ಮಾಪಕ ಸುರೇಶ್ ಚಿತ್ರ ನಿರ್ಮಿಸಲಿದ್ದಾರೆ. ಚಿತ್ರ ವಿಜಯದಶಮಿಯಂದು ಸೆಟ್ಟೇರಲಿದೆ.

ಮಾದೇಶ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಿವಣ್ಣನಿಗೆ ಈ ಚಿತ್ರದ ಒಂದೆಳೆ ಕಥೆಯನ್ನು ಹೇಳಿದರಂತೆ. ಕಥೆ ಕೇಳಿ ಖುಷಿಯಾದ ಶಿವಣ್ಣ ಇದರಲ್ಲಿ ನಟಿಸಿಲು ಒಪ್ಪಿ ಕಥೆಯನ್ನು ಇನ್ನಷ್ಟು ಡೆವಲಪ್ ಮಾಡುವಂತೆ ಹೇಳಿದರೆಂದು ನಿರ್ದೇಶಕ ರಘು ಹೇಳಿದರು. ಇದೊಂದು ವಿಶಿಷ್ಟ ಚಿತ್ರ ಎಂದು ಚಿತ್ರದ ಬಗ್ಗೆ ಹೇಳಿಕೊಂಡ ಅವರು ಆ ವಿಶೇಷತೆಯ ಬಗ್ಗೆಯೂ ಹೇಳಿದರು.

ಚಿತ್ರವನ್ನು ಹಿಂದಿ ಹಾಗೂ ಕನ್ನಡ ಎರಡು ಭಾಷೆಯಲ್ಲೂ ನಿರ್ಮಿಸಬೇಕೆಂದಿದ್ದಾರಂತೆ. ಶಿವಣ್ಣನ ಜೊತೆ ನಾಯಕಿಯಾಗಿ ನಟಿಸಲು ಬಾಲಿವುಡ್ ನಟಿಯನ್ನು ಕರೆತರಲಿದ್ದಾರಂತೆ. ಸ್ಯಾಂಡಲ್ವುಡ್ ನಾಯಕನ ಜೊತೆ ಬಾಲಿವುಡ್ ನಾಯಕಿ ನಟಿಸುವುದರಿಂದ ಚಿತ್ರ ಅದ್ಭುತವಾಗಿ ಮೂಡಿಬರುವುದರ ಜೊತೆ ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು. ಚಿತ್ರವನ್ನು 10 ರಿಂದ 12 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಿದ್ದಾರೆ. ಚಿತ್ರೀಕರಣಕ್ಕಾಗಿ ಬೇರೆ ಬೇರೆ ದೇಶಗಳಿಗೆ ಹೋಗಬೇಕಾದ್ದರಿಂದ ವೆಚ್ಚ ಹೆಚ್ಚಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಸುರೇಶ್.

Share this Story:

Follow Webdunia kannada