ಸದ್ಯಕ್ಕೆ ನನ್ನ ಮತ್ತು ಹರ್ಮನ್ ಮಾಡುವೆ ಬಗ್ಗೆ ಏನು ಕೇಳ ಬೇಡಿ ... ಬಿಪಾಸ ಬಸು
, ಶನಿವಾರ, 22 ಮಾರ್ಚ್ 2014 (09:39 IST)
ಮಾತಿನ ಮಲ್ಲಿ ಎನ್ನುವ ಖ್ಯಾತಿ ಪಡೆದ ನಟಿ ಬಾಲಿವುಡ್ ಹಾಟ್ ಅಂಡ್ ಸೆಕ್ಸಿ ಬ್ಲಾಕ್ ಬ್ಯೂಟಿ ಬಿಪಾಸಾ ಬಸು. ಆಕೆ ಇತ್ತೀಚಿಗೆ ಮಾತನ್ನು ಕಡಿಮೆ ಮಾಡಿ ಬಿಟ್ಟಿದ್ದಾಳೆ. ಅದಕ್ಕೆ ಕಾರಣ ಆಕೆಯ ಪ್ರೀತಿ. ಅಂದರೆ ಹರ್ಮನ್ ಬವೇಜ ಮತ್ತು ಬಿಪ್ ಇಬ್ಬರು ಪ್ರೀತಿ ಮಾಡ್ತಾ ಇರುವ ಸಂಗತಿ ಈಗ ಎಲ್ಲರಿಗು ಗೊತ್ತೇ ಗೊತ್ತು. ಏನು ಬೇಕಾದರೂ ಮಾತಾಡಲು ಇಷ್ಟ ಪಡುವ ಬಿಪ್ ಅದ್ಯಾಕೋ ತನ್ನ ಪ್ರೀತಿಯ ಬಗ್ಗೆ ಹೆಚ್ಚು ಮಾತಾಡಲು ಇಷ್ಟ ಪಡ್ತಾ ಇಲ್ಲ. ಜಾನ್ ಅಬ್ರಹಾಂ ಜೊತೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಹ ಜೀವನ ನಡೆಸಿದ್ದ ಬಿಪ್ ಇನ್ನೇನು ಜಾನ್ ಜೊತೆ ಮದುವೆ ಆಗಿಯೇ ಬಿಡುತ್ತಾಳೆ ಎಂದು ತಿಳಿದಿದ್ದರೂ ಬಾಲಿವುಡ್ ಮಂದಿ. ಆದರೆ ಅವರಿಬ್ಬರ ನಡುವಿನ ಬಾಂಧವ್ಯ ಕಿತ್ತು ಹೋಗಿದ್ದಲ್ಲದೇ, ಆ ಬಳಿಕ ಜಾನ್ ಮತ್ತೊಬ್ಬ ಹುಡುಗಿಯ ಜೊತೆಯಲ್ಲಿ ಮದುವೆಯನ್ನು ಸಹಿತ ಆದ ಕಥೆ ಎಲ್ಲರಿಗು ಗೊತ್ತೇ ಇದೆ