Publish Date: Thu, 11 Oct 2007 (18:17 IST)
Updated Date: Thu, 11 Oct 2007 (18:15 IST)
ಬಾಲಿವುಡ್ ಜಗತ್ತಿನ ಮಹಾನ್ ನಟ ಬಿಗ್ ಬಿಗೆ 65 ವರ್ಷ ತುಂಬಿದೆ. ಆದರೆ ಅವರ 65ನೆ ವರ್ಷದ ಹುಟ್ಟುಹಬ್ಬ ಮಾತ್ರ ಯಾವುದೇ ಸಂಭ್ರಮ, ಸಡಗರವಿಲ್ಲದೇ ಆಚರಣೆಯಾಯಿತು.
ಅವರ ಪುತ್ರ ನಮೀಬಿಯಾದಲ್ಲಿ ಗೋಲ್ಡಿ ಬೆಹಲ್ ಅವರ ದ್ರೋಣ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸೊಸೆ ಐಶ್ವರ್ಯ ಬೋಸ್ಟನ್‌ನಲ್ಲಿ ಪಿಂಕ್ ಪ್ಯಾಂಥರ್ ಚಿತ್ರೀಕರಣದಲ್ಲಿದ್ದಾರೆ. ಪತ್ನಿ ಜಯಾ ಬಚ್ಚನ್ ಫ್ಲೂ ಜ್ವರದಿಂದ ನರಳುತ್ತಿದ್ದಾರೆ. ಇವೆಲ್ಲ ಸಮಸ್ಯೆಗಳಿಗೆ ಜತೆಯಾಗಿ ತೀವ್ರ ಕಾಯಿಲೆಗೀಡಾಗದ ತಾಯಿಯ ಬಗ್ಗೆ ಅವರನ್ನು ಆವರಿಸಿದ ಚಿಂತೆ.
ಬಚ್ಚನ್ ಹುಟ್ಟುಹಬ್ಬದ ಅಂಗವಾಗಿ ಚಿತ್ರೀಕರಣವನ್ನು ಸಂಜೆಗೆ ಮುಗಿಸಿ ತನ್ನ ತಾಯಿಯ ಜತೆ ಕಳೆಯಲು ನೇರವಾಗಿ ಆಸ್ಪತ್ರೆಗೆ ಅವರು ತೆರಳಿದರು. ತಾಯಿಯ ಜತೆ ಹುಟ್ಟುಹಬ್ಬದ ದಿನ ಕಳೆಯುವುದರಿಂದ ಅವರಿಗೆ ಆತ್ಮಬಲ ತಂದುಕೊಟ್ಟಿತು.
ತಾಯಿಗೆ ನಿಷ್ಠರಾದ ಮಕ್ಕಳಿಗೆ ಮಾತ್ರ ಅದು ಗೊತ್ತಾಗುತ್ತದೆ ಎಂದು ಬಚ್ಚನ್ ನಿಕಟ ಸ್ನೇಹಿತರೊಬ್ಬರು ಹೇಳುತ್ತಾರೆ.