Article Bollywood Gossips %e0%b2%b8%e0%b2%82%e0%b2%9c%e0%b2%af%e0%b3%8d%e2%80%8c %e0%b2%a6%e0%b2%a4%e0%b3%8d%e2%80%8c%e0%b2%a8%e0%b3%8d%e0%b2%a8%e0%b3%81 %e0%b2%95%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%b0%e0%b3%81%e0%b2%b5 %e0%b2%b0%e0%b3%8b%e0%b2%97%e0%b2%97%e0%b2%b3%e0%b3%81 107053000006_1.htm

Daily Horoscope

Select Your Language

Notifications

webdunia
webdunia
webdunia
webdunia

ಸಂಜಯ್‌ ದತ್‌ನ್ನು ಕಾಡುತ್ತಿರುವ ರೋಗಗಳು

ಬಾಲಿವುಡ್‌
PTI
ನ್ಯಾಯಾಲಯ ಪ್ರಕರಣಗಳು, ಕೌಟುಂಬಿಕ ಸಮಸ್ಯೆಗಳು ಇತ್ಯಾದಿ ಒತ್ತಡದ ಬದುಕಲ್ಲಿರುವ ಬಾಲಿವುಡ್‌ನಟ ಸಂಜಯ್‌ದತ್ತ್‌ ಇದೀಗ ತೀವ್ರ ಸ್ವರೂಪದ ಮಾರಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿರುವ ಸಂಜೈ ಜೈಲು ಸೇರುವರೇ ಎಂಬ ಕುತೂಹಲ ಸಾರ್ವಜನಿಕರಲ್ಲಾದರೆ, ಹಾಗಾಗುವುದೇ ಎಂಬುದು ಅಭಿಮಾನಿಗಳ ಕಳವಳ. ಈ ನಡುವೆ ಶ್ವಾಸಕೋಶ, ಬೆನ್ನೆಲುಬಿನ ಸಮಸ್ಯೆಗಳು ಸಂಜಯ್‌ಗೆ ಹೊಸ ಕಾಟವಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣಗಳು, ಜೀವನದಲ್ಲಿ ಪ್ರವೇಶಿಸಿದ ಹೊಸ ಗೆಳತಿಯಿಂದಾಗಿ ಸಂಭವಿಸಿದ ಕೌಟುಂಬಿಕ ಬಿರುಗಾಳಿಯ ನಡುವೆಯೇ ಸಂಜಯದತ್ತನ್ನು ಕಾಡುತ್ತಿದ್ದ ಹಳೆಯ ಶ್ವಾಸಕೋಶ ರೋಗ ಮತ್ತೆ ಕಾಡತೊಡಗಿದೆ, ಬೆನ್ನೆಲುಬು ಪಕ್ಕೆಗಳ ಎಲುಬು ಮುರಿತ ಅವರನ್ನು ಜರ್ಝರಿತರನ್ನಾಗಿಸಿದೆ. ಇಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ದತ್‌ ನಿಗದಿತ ಚಿಕಿತ್ಸೆಯನ್ನು ನಿರಂತರ ಪಡೆಯುತ್ತಿರಬೇಕಿದೆ.

ಇದೆಲ್ಲಾ ಗೊಂದಲಗಳ ನಡುವೆ ದತ್‌ ಇಂದ್ರ ಕುಮಾರ್‌ ಅವರ ಹೊಸ ಚಿತ್ರ" ಧಾಮಾಲ್‌"ನಲ್ಲಿ ಅಭಿನಯಿಸುವ ಹೊಣೆಯನ್ನೂ ಹೊಂದಿದ್ದಾರೆ. ಈ ಎಲ್ಲಾ ಒತ್ತಡಗಳಿಗೂ ಅವರು ಸಮಯ ಹೊಂದಿಸಿಕೊಳ್ಳಬೇಕಿದೆ. ಕೆಲವೊಮ್ಮೆ ಹಾಯಾಗಿ ನಿದ್ರಿಸಲೂ ಅವರಿಗೆ ಸಮಯವಿಲ್ಲ. ಮಲಗಿದರೂ ನಿದ್ದೆ ಬರಲು ಸಾಧ್ಯವೇ ಎನ್ನುವುದು ಕುಚೋದ್ಯದ ಪ್ರಶ್ನೆಯಾಗಲಾರದು.

Share this Story:

Follow Webdunia kannada