Article Bollywood Gossips %e0%b2%b8%e0%b2%82%e0%b2%9c%e0%b2%af%e0%b3%8d %e0%b2%a6%e0%b2%a4%e0%b3%8d%e2%80%8c%e0%b2%97%e0%b3%86 %e0%b2%9c%e0%b2%be%e0%b2%ae%e0%b3%80%e0%b2%a8%e0%b3%81 %e0%b2%b0%e0%b2%b9%e0%b2%bf%e0%b2%a4 %e0%b2%ac%e0%b2%82%e0%b2%a7%e0%b2%a8 %e0%b2%b5%e0%b2%be%e0%b2%b0%e0%b3%86%e0%b2%82%e0%b2%9f%e0%b3%8d 111052800048_1.htm

Daily Horoscope

Select Your Language

Notifications

webdunia
webdunia
webdunia
webdunia

ಸಂಜಯ್ ದತ್‌ಗೆ ಜಾಮೀನು ರಹಿತ ಬಂಧನ ವಾರೆಂಟ್

ಸಂಜಯ್ ದತ್
PR
ಸದಾ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುವ ಬಾಲಿವುಡ್ ನಟ ಸಂಜಯ್ ದತ್‌ಗೆ ಉತ್ತರ ಪ್ರದೇಶದ ಮೌ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ನಟ ಸಂಜಯ್ ದತ್ 2009ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಈ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗಿ ವಿವರಣೆ ಸಲ್ಲಿಸಲು ನೀಡಲಾಗಿದ್ದ ಸಮನ್ಸ್‌ನ್ನು, ಗೈರುಹಾಜರಿ ಕಾರಣ ನೀಡಿ ಹಿಂತಿರುಗಿಸಿದ್ದ ಸಂಜಯ್ ದತ್, ಒಮ್ಮೆಯೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಕಾರಣದಿಂದ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದು ಜುಲೈ 8ರಂದು ನ್ಯಾಯಾಂಗ ವಿಚಾರಣೆಗೆ ಅವರನ್ನು ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಸಂಜಯ್ ದತ್ 2009ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮುಸಲ್ಮಾನ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮೌ ಪ್ರದೇಶಕ್ಕೆ ಭೇಟಿನೀಡಿ ತನ್ನ ಪಕ್ಷದ ಅಭ್ಯರ್ಥಿ ಅರ್ಶದ್ ಜಮಾಲ್ ಪರ ಪ್ರಚಾರ ನಡೆಸಿದ್ದರು. ಈ ವೇಳೆ ಮತದಾರರನ್ನು ಓಲೈಸುತ್ತಿದ್ದ ಸಂಜಯ್, 'ನಾನು ಪೊಲೀಸ್ ಸುಪರ್ದಿಯಲ್ಲಿದ್ದಾಗ ನನ್ನ ತಾಯಿ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಪೊಲೀಸರು ಅತಿಯಾದ ಕಿರುಕುಳ ನೀಡಿದ್ದರು. ನಾನೊಬ್ಬ ಮುಸಲ್ಮಾನ ತಾಯಿಯ ಮಗ' ಎಂದಿದ್ದರು. ಇಂತಹ ಹೇಳಿಕೆಗಳು ಚುನಾವಣಾ ಆಯೋಗದ ನಿಯಮ ಬಾಹಿರವಾಗಿದ್ದು, ಈ ನಿಟ್ಟಿನಲ್ಲಿ ಸಂಜಯ್ ದತ್ ವಿರುದ್ಧ ನ್ಯಾಯಾಲಯ ಚಾಟಿ ಬೀಸಿದೆ.

ಸುನಿಲ್ ದತ್ ಮತ್ತು ನರ್ಗೀಸ್ ದತ್ ದಂಪತಿಯ ಪುತ್ರನಾದ ಸಂಜಯ್ ದತ್ ಮುಂಬಯಿ ಸರಣಿ ಸ್ಪೋಟ, ಅಕ್ರಮ ಮಾರಕಾಯುಧ ಸಂಗ್ರಹ ಸೇರಿದಂತೆ ಕೆಲವಾರು ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸವನ್ನೂ ಅನುಭವಿಸಿದ್ದಾರೆ.

Share this Story:

Follow Webdunia kannada