Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಮತ್ತೆ ಜೈಲು ಹಕ್ಕಿ ..!

ಸಂಜಯ್ ದತ್
, ಸೋಮವಾರ, 24 ಮಾರ್ಚ್ 2014 (10:15 IST)
PR
ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಗೂಡಿಗೆ ಸೇರ್ಪಡೆ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 21 ರಂದು ಪುಣೆಯ ಯರವಾಡ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಆಗಿದ್ದರು. ಅದಾದ ನಂತರ ಅವರಿಗೆ ಎರಡು ಬಾರಿ ಪೆರೋಲ್ ಅವಧಿಯನ್ನು ಹೆಚ್ಚಿಸಿ ಕೊಂಡರು. ಈ ಮುಖಾಂತರ ಅವರ ಬಗ್ಗೆ ಕಾಟು ಟೀಕೆಗಳು ಉದುರಿದ್ದವು .

ಮಾಧ್ಯಮಗಳಲ್ಲಿ ಅದೇ ಸಂಗತಿಯು ದೊಡ್ಡದಾಗಿ ಎಲ್ಲರ ಗಮನ ಸೆಳೆದಿತ್ತು. ತನ್ನ ಪತ್ನಿ ಮಾನ್ಯತಳಿಗೆ ಅನಾರೋಗ್ಯ, ದಯಮಾಡಿ ಪೆರೋಲ್ ಅವಧಿ ಹೆಚ್ಚಿಸಿ ಎಂದು ಸಂಜು ಬಾಬ ಮನವಿ ಮಾಡಿದ ಕಾರಣ ಅವರಿಗೆ ಈ ರೀತಿಯ ಅವಕಾಶ ದೊರಕಿತ್ತು.

webdunia
PR
ಈಗ ಅದರ ಗಡವು ಮುಗಿದ ಕಾರಣ ಮತ್ತೆ ಜೈಲಿಗೆ ಹಿಂತಿರುಗಿದ್ದಾರೆ.

1993 ರಲ್ಲಿ ನಡೆದ ಮುಂಬೈ ಸ್ಪೋಟದಲ್ಲಿ ಸಂಜು ಬಾಬ ಅವರು ಅಕ್ರಮವಾಗಿ ಏಕೆ -56 ಹೊಂದಿದ್ದರು ಎನ್ನುವ ಅಪರಾಧದ ಅಡಿಯಲ್ಲಿ ಅವರಿಗೆ ಐದು ವರ್ಷಗಳ ಕಾರಗಾರದ ಶಿಕ್ಷೆ ಆಗಿತ್ತು.

ಈಗ ಅವರ ಶಿಕ್ಷೆಯ ಅವಧಿಯನ್ನು ಪೂರ್ಣ ಮಾಡಲೇ ಬೇಕಾಗಿರುವುದರಿಂದ ಸಂಜು ಬಾಬ ಅವರು ಮತ್ತೆ ಯರವಾಡ ಜೈಲಿಗೆ ಹೊರಟಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada