Select Your Language

Notifications

webdunia
webdunia
webdunia
webdunia

ಸಂಗೀತ ಸಂಪೂರ್ಣ ಸಂಗೀತ ಆಗಿರ ಬೇಕು.. ಅದರ ಹದ ಕೆಡ ಬಾರದು - ಇಳಯರಾಜ

ಪ್ರಕಾಶ್ ರಾಜ್
, ಬುಧವಾರ, 2 ಏಪ್ರಿಲ್ 2014 (10:00 IST)
PR
ಯುಗಾದಿ ಹಬ್ಬದಲ್ಲಿ ನಟ-ನಿರ್ದೇಶಕ ಪ್ರಕಾಶ್ ರಾಜ್ ಅವರ ಬಹು ನಿರೀಕ್ಷಿತ ಚಿತ್ರ ಉಲವಚಾರು ಬಿರ್ಯಾನಿ ಚಿತ್ರದ ಆಡಿಯೋ ಹೈದಾರ ಬಾದ್ ನಲ್ಲಿ ರಿಲೀಸ್ ಆಯ್ತು. ಅಂದು ಕಾರ್ಯಕ್ರಮಕ್ಕೆ ಬಂದಿದ್ದ ಭಾರತದ ಪ್ರಸಿದ್ಧ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾಗಿರುವ ಇಳೆಯರಾಜ ಅವರನ್ನು ಸನ್ಮಾನಿಸಲಾಯಿತು.

ಆಗ ಅವರ ಮಾತನಾಡುತ್ತ, ನನಗೆ ಸನ್ಮಾನ ಮಾಡಲಾಗುತ್ತದೆ ಎಂದು ಮೊದಲೇ ಗೊತ್ತಾಗಿದ್ದಿದ್ದರೆ ಖಂಡಿತ ಈ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ ಎನ್ನುವ ಮಾತನ್ನು ಹೇಳಿದರು ಇಳಯರಾಜ.ಪ್ರಕಾಶ್ ರಾಜ್ ಅವರು ಹೊರಗೆ ಕಾಣುವ ಗುಣ ಬೇರೆ ಒಳಗಿನ ಗುಣ ಬೇರೆ ಎಂದು ಈ ಸಮಯದಲ್ಲಿ ಹೇಳಿದರು ಇಳಯರಾಜ .

ಸಂಗೀತ ಎಂದರೆ ಸಂಪೂರ್ಣವಾಗಿ ಅದು ಸಂಗೀತ ಆಗಿರ ಬೇಕು .. ಬೆರಕೆ ಆದರೆ ಪಿಜ್ಜ ಮತ್ತು ಹಪ್ಪಳ ತಿಂದಂತೆ ಆಗುತ್ತದೆ ಎನ್ನುವ ಮಾತನ್ನು ಹೇಳಿದ್ದು ಸಹ ಸಂಗೀತ ನಿರ್ದೇಶಕರೇ! ನಿರ್ಮಾಪಕ ಕೆ.ಎಸ.ರಾಮರಾವ್, ಅವರ ಕ್ರಿಯೇಟಿವ್ ಕಮರ್ಷಿಯಲ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಸಿದ್ಧ ಆಗಿದೆ. ತೆಲುಗು ಇಂಡಸ್ಟ್ರಿಯ ಗಣ್ಯರು ಈ ಆಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada