Select Your Language

Notifications

webdunia
webdunia
webdunia
webdunia

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಈಗ ಸ್ಕಾಟ್ ಲ್ಯಾಂಡ್ ಡಾಕ್ಟರ್

ಎಆರ್ ರೆಹಮಾನ್
, ಮಂಗಳವಾರ, 4 ಫೆಬ್ರವರಿ 2014 (10:54 IST)
PR
PR
ಭಾರತದ ಹೆಮ್ಮೆಯ ಸಂಗೀತಗಾರ ಎ.ಆರ್. ರೆಹಮಾನ್ ಭಾರತದಲ್ಲಿ ಮಾತ್ರವಲ್ಲ ವಿಶ್ವ ವಿಖ್ಯಾತ ಸಂಗೀತ ನಿರ್ದೇಶಕ. ಅವರು ಈಗ ಸಂಗೀತಗಾರ ಮಾತ್ರವಲ್ಲ ಮತ್ತೊಮ್ಮೆ ಡಾಕ್ಟರು ಸಹ ಆಗಿದ್ದಾರೆ. ಆದರೆ ನಮ್ಮ ದೇಶದಲ್ಲಿ ಅಲ್ಲ ಸ್ಕಾಟ್ ಲ್ಯಾಂಡ್ ನಲ್ಲಿ. 1990ರ ಬಳಿಕ ಸಂಗೀತ ಕ್ಷೇತ್ರದಲ್ಲಿ ಹೊಸತನ ನೀಡಿದ ಆ ಮಹಾನ್ ಸಾಧಕ ಎ.ಆರ್. ರೆಹಮಾನ್ . ಆತನ ಸಂಗೀತ ನೀಡದ ಹಾಡುಗಳು ವಿಶ್ವ ಮಟ್ಟದಲ್ಲಿ ಅಭಿಮಾನಿಗಳನ್ನು ನೀಡಿದೆ. ಎರಡು ಆಸ್ಕರ್ ಅವಾರ್ಡ್ ಗಳನ್ನೂ ತನ್ನದಾಗಿಸಿಕೊಂಡಿರುವ ಈ ಪ್ರತಿಭೆ ಗೋಲ್ಡನ್ ಗ್ಲೋಬಲ್ ಪದ್ಮ ಭೂಷಣ ದಂತಹ ಬಿರುದು ಅಲ್ಲದೆ,ಅನೇಕ ಬಾರಿ ಫಿಲಿಂ ಫೇರ್ ಅವಾರ್ಡ್, ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ .

ಅನೇಕ ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪ್ರಸ್ತುತ ಸ್ಕಾಟ್ಲ್ಯಾಂಡ್ ದೇಶವು ಸಹ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ದೇಶಕ್ಕೆ ಸಂಬಂಧಪಟ್ಟ ರಾಯಲ್ ಕೆನ್ಸರ್ ಪೇಟಿಕ್ ಸಂಸ್ಥೆ ಈಗ ಡಾಕ್ಟರೇಟ್ ನೀಡಿ ಈ ಅಭಿಜಾತ ಕಲಾವಿದರಿಗೆ ಗೌರವ ಸಲ್ಲಿಸಿದೆ.

Share this Story:

Follow Webdunia kannada