Select Your Language

Notifications

webdunia
webdunia
webdunia
webdunia

ಸಂಗಾತಿಯನ್ನು ಗೌರವಿಸುವುದನ್ನು ಬೆಳೆಸಿಕೊಂಡರೆ ದಾಂಪತ್ಯ ಸುಖಕರ ಅಂತಾರೆ ಅಜಯ್ ದೇವಗನ್

ಅಜಯ್ ದೇವಗನ್
, ಮಂಗಳವಾರ, 11 ಫೆಬ್ರವರಿ 2014 (09:43 IST)
PR
ವೈವಾಹಿಕ ಬದುಕಲ್ಲಿ ಗೆಲುವು ಸಾಧಿಸುವುದರ ಹಿಂದೆ ಅಂತಹ ಯಾವುದೇ ಬಗೆಯ ರಹಸ್ಯಗಳು ಇಲ್ಲ ಎನ್ನುವ ಮಾತನ್ನು ಬಾಲಿವುಡ್ ನಟ - ನಿರ್ದೇಶಕ ಅಜಯ್ ದೇವಗನ್ ಳಿಸಿದ್ದಾರೆ.ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿ ಇಟ್ಟರೆ ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಮುಖ್ಯವಾಗಿ ನಾವು ನಮ್ಮ ಎದುರಿರುವವರನ್ನು ಗೌರವಿಸ ಬೇಕು, ಅವರ ಭಾವನೆಗಳಿಗೆ ಬೆಲೆ ನೀಡ ಬೇಕು ಆಗ ಖುಷಿಯೂ, ನೆಮ್ಮದಿ ತಂತಾನೇ ಬರುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಅಜಯ್ ದೇವಗನ್. ಈಗಷ್ಟೇ ಅವರು ತಮ್ಮ ವೈವಾಹಿಕ ಮಹೋತ್ಸವನ್ನು ಆಚರಿಸಿಕೊಂಡರು . ಬರೋಬ್ಬರಿ ಹದಿನೈದು ವರ್ಷಗಳ ಈ ಸುಂದರ ದಾಂಪತ್ಯದ ರಹಸ್ಯದ ಬಗ್ಗೆ ಅವರು ಬಿಚ್ಚಿ ಹೇಳಿದ್ದು. ಹೀಗೆ. ನಟಿ ಕಾಜೋಲ್ ಜೊತೆ ಮದುವೆ ಆಗಿರುವ ಅಜಯ್ ದೇವಗನ್ ಎರಡು ಮಕ್ಕಳ ತಂದೆ.

ಬಾಲಿವುಡ್ ನಲ್ಲಿ ಮದುವೆ ಹೆಚ್ಚುಕಾಲ ಬಾಳಿಕೆ ಬರುವುದಿಲ್ಲ ಎನ್ನುವ ಮಾತನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಅದು ಕೇವಲ ಊಹೆ. ಕೇವಲ ಬಾಲಿವುಡ್ ಮಾತ್ರವಲ್ಲ ಯಾವುದೇ ವುಡ್ ಆಗಿರಲಿ , ಯಾವುದೇ ಬಗೆಯ ವೃತ್ತಿಯಲ್ಲಿ ಇರಲಿ ಭಿನ್ನತೆ ಸಾಮಾನ್ಯ. ಅನೇಕ ಕಾರಣಗಳು ಆ ಬಾಂಧವ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಅಜಯ್. ದಾಂಪತ್ಯ ಬದುಕಿನ ಗಟ್ಟಿತನ ವ್ಯಕ್ತಿಗಳ ಮನಸ್ಥಿತಿಯನ್ನು ಆಧರಿಸಿರುತ್ತದೆ ಎಂದಿದ್ದಾರೆ. 1999 ರಲ್ಲಿ ಕಾಜೋಲ್ ಜೊತೆ ಅಜಯ್ ವಿವಾಹವಾಗಿ ದ್ದಾರೆ. ಮಗಳು ಸೈನಾ, ಮಗ ಯೋಗ ಜೊತೆಗೆ ಸುಂದರ ಬದುಕು ನಡೆಸುತ್ತಿರುವ ಈ ಅಜಯ್ ಈಗ ಪ್ರಭುದೇವಾ ನಿರ್ದೇಶನದ ಆಕ್ಷನ್ ಜಾಕ್ಸನ್ ಮತ್ತು ರೋಹಿತ್ ಶೆಟ್ಟಿ ನಿರ್ದೇಶನ ಸಿಂಗಂ 2 ರ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ.

Share this Story:

Follow Webdunia kannada