Publish Date: Thu, 22 Aug 2013 (10:14 IST)
Updated Date: Thu, 22 Aug 2013 (10:13 IST)
ಬಾಲಿವುಡ್ನ ಕ್ವೀನ್ ಶ್ರೀದೇವಿ ಭರ್ಜರಿಯಾಗಿಯೇ ತಮ್ಮ ಐವತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಯಿತು. ಆಕೆಯ ಪತಿ ಬೋನಿ ಕಪೂರ್ ಮುಂಬಯಿಯ ಐಷಾರಾಮಿ ಸೋಬೊ ನೈಟ್ಕ್ಲಬ್ನಲ್ಲಿ ಪಾಟರ್ಿ ಆಯೋಜಿಸಿದ್ದರು. ಶ್ರೀದೇವಿಗೆ ವಿಶ್ ಮಾಡಲು ಬಾಲಿವುಡನ್ ದಿಗ್ಗಜರು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರಮುಖ ಸೆಲೆಬ್ರೆಟಿಗಳಾದ ಶಾರೂಖ್ ಖಾನ್, ಏಕ್ತಾ ಕಪೂರ್, ಅಮಿತಾಭ್ ಬಚ್ಚನ್, ಕುಟುಂಬದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಕಪೂರ್, ಮಗ ಅರ್ಜುನ್ ಕಪೂರ್ ಕೂಡಾ ಗೈರು ಹಾಜರಾಗಿದ್ದರು.
ಶ್ರೀದೇವಿ ಮಗಳೊಂದಿಗೆ ಕ್ಲಬ್ಗೆ ಆಗಮಿಸುತ್ತಿದ್ದಂತೆ ಹೊರಗೆ ಕಾಯುತ್ತಿದ್ದ ಫೊಟೋಗ್ರಾಫರ್ಸ್ ತಾಮುಂದು ನಾಮುಂದು ಎಂದು ಫೊಟೋ ಕ್ಲಿಕ್ಕಿಸಿದರು. ಬೋನಿ ಕಪೂರ್ ಪಾರ್ಟಿಗೆ ಬಂದ ಗಣ್ಯರನ್ನು ಸ್ವಾಗತಿಸುತ್ತಿದ್ದರು. ರಾಹುಲ್ ಮಹಾಜನ್, ಯುವರಾಜ್ ಸಿಂಗ್, ಸುಶ್ಮಿತಾ ಸೇನ್, ರಿಷಿ ಕಪೂರ್, ರಾಕೇಶ್ ರೋಷನ್, ಮಧುರ್ ಭಂಡಾರ್ಕರ್ ಮೊದಲಿಗೆ ಆಗಮಿಸಿದರು. ಬಳಿಕ ರಿತೇಶ್ ಹಾಗೂ ಜೆನಿಲಿಯಾ, ಹೇಮಾಮಾಲಿನಿ, ಈಶಾ ಡಿಯೋಲ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅನಿಲ್ ಕಪೂರ್, ಜೂಹಿ ಚಾವ್ಲಾ ಮೊದಲಾದವರಿದ್ದರು. ಪಾರ್ಟಿಯಲ್ಲಿ ಕೇಳಿ ಬರುತ್ತಿದ್ದ ಸ್ಲೋ ಇನ್ಸ್ಟ್ರುಮೆಂಟಲ್ ಟ್ರ್ಯಾಕ್ಗೆ ಕೆಲವರು ಹೆಜ್ಜೆ ಹಾಕಿದರು. ಶ್ರೀದೇವಿಗೂ ಡಾನ್ಸ್ ಮಾಡುವಂತೆ ಬಲವಂತಪಡಿಸಲಾಯಿತು, ಆದರೆ ಅವರು ಹೆಜ್ಜೆ ಹಾಕಲಿಲ್ಲ. ವಿದೇಶಾಂಗ ಸಚಿವ ಸಲ್ಮಾನ್ ಖುಷರ್ಿದ್ ಕೂಡಾ ಕಾರ್ಯಕ್ರಮದಲ್ಲಿ ಹಾಜರಿದ್ದರು.