ಶ್ರೀದೇವಿ ನಟನೆ ಚಿತ್ರಕ್ಕೆ ಸಿದ್ಧತೆಗಳು ಸಾಗಿವೆ!
, ಶನಿವಾರ, 5 ಏಪ್ರಿಲ್ 2014 (09:47 IST)
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟಿಸಿ, ಆ ಬಳಿಕ ದೀರ್ಘವಾದ ವಿರಾಮ ಪಡೆದು ಮತ್ತೆ ನಟಿಸಲು ಆರಂಭಿ ಸುವವರಿಗೆ ಸಾಮಾನ್ಯವಾಗಿ ಸೆಕಂಡ್ ಇನ್ನಿಂಗ್ಸ್ ಆರಂಭ ಆಯ್ತು ಅನ್ನುವುದು ವಾಡಿಕೆ. ಅದೇ ರೀತಿ ಸುಮಾರು ಹದಿನೇಳು ವರ್ಷಗಳ ಕಾಲ ಚಿತ್ರರಂಗದ ಕಡೆಗೆ ತಲೆ ಹಾಕದೆ ಆ ಬಳಿಕ ಇಂಗ್ಲೀಶ್ ವಿಂಗ್ಲಿಶ್ ನಲ್ಲಿ ನಟಿಸಿದ ನಂತರ ಎಲ್ಲರು ಶ್ರೀದೇವಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಯ್ತು ಎನ್ನುವ ಮಾತನ್ನು ಹೇಳಿದ್ದರು.ಆದರೆ ಈ ಮಾತನ್ನು ಆಕೆ ಸಮ್ಮತಿಸುವುದಿಲ್ಲ. ಇಲ್ಲಿವರೆಗೂ ನಾನು ತೆರೆಯ ಮೇಲೆ ಕಾಣಿಸಿ ಕೊಳ್ಳದೆ ಇದ್ದರೂ ಸಹ ತೆರೆಯ ಹಿಂದೆ ನನ್ನ ಪತಿಯ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಸಿನಿಮಾ ಸಮಾರಂಭಗಳಿಗೆ ಸಹ ಹಾಜರಾಗಿದ್ದೇನೆ.
ಆದ್ದರಿಂದ ಇದನ್ನು ಸೆಕೆಂಡ್ ಇನ್ನಿಂಗ್ಸ್ ಎಂದು ಹೇಳುವುದು ಉಚಿತವೆ ಎನ್ನುವ ಪ್ರಶ್ನೆ ಈ ಅತಿಲೋಕ ಸುಂದರಿಯದ್ದು!ಆಕೆಯನ್ನು ಅಭಿಮಾನಿಸುವವರಿಗೆ ಬೇರೆ ಯಾವ ವಿವರಣೆ ಬೇಕಿಲ್ಲ ಆಕೆಯ ಚಿತ್ರಗಳನ್ನು ಹೊರತು ಪಡಿಸಿ. ಅದೇ ರೀತಿ ಮೊದಲ ಚಿತ್ರ ಇಂಗ್ಲೀಶ್ ವಿಂಗ್ಲೀಶ್ ಮುಖಾಂತರ ಹೊಸ ದಾಖಲೆ ನಿರ್ಮಿಸಿ ಭೇಷ್ ಅನ್ನಿಸಿಕೊಂಡ ಗೌರಿ ಈಗ ಶ್ರೀದೇವಿ ಕಾಂಬಿನೇಶನ್ ನ ಲ್ಲಿ ಮತ್ತೊಂದು ಚಿತ್ರ ನಿರ್ದೇಶಿಸಲು ಸಿದ್ಧ ಆಗಿದ್ದಾರೆ. ಇದರಲ್ಲಿಯೂ ಸಹ ಶ್ರೀದೆವಿಯನ್ನು ಮಧ್ಯಮ ವರ್ಗದ ಮಹಿಳೆಯಾಗಿ ತೋರಿಸುತ್ತಿದ್ದಾರೆ ಗೌರಿ.