ಶ್ರದ್ಧಾ ಕಪೂರ್ ಐಟಂ ಗರ್ಲ್ ರೂಪದಲ್ಲಿ
Publish Date: Wed, 10 Jul 2013 (11:06 IST)
Updated Date: Wed, 10 Jul 2013 (11:05 IST)
ಯಾವ ಪಾತ್ರದ ನಟನೆಗೂ ಸೈ ಎಂದಿದ್ದ ಶ್ರದ್ಧಾ ಇದೀಗ ಐಟಂ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾಳೆ. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಬೇಕೆಂಬ ಬಯಕೆಯಿರುವ ಶ್ರದ್ಧಾ ಕಪೂರ್ಗೆ ಉತ್ತಮ ಅವಕಾಶಗಳೇ ಸಿಕ್ಕಿರಲಿಲ್ಲ.ಬಾಕ್ಸ್ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಆಶಿಖಿ-2 ಚಿತ್ರದಲ್ಲಿ ಅಭಿನಯಿಸಿದ್ದ ಶ್ರದ್ಧಾ ಇದೀಗ ಕರಣ್ ಜೋಹರ್ ಅವರ ಮುಂಬರುವ ಚಿತ್ರ ಉಂಗ್ಲಿಯಲ್ಲಿ ಫುಲ್ ಹಾಟ್ ಆಗಿ ಕಾಣಿಸಲಿದ್ದಾರೆ. ಈ ಬಳಿಕವಾದರೂ ಆಕೆಗೆ ಬಾಲಿವುಡ್ನಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತದೋ ಎಂಬುದನ್ನು ಕಾದು ನೋಡಬೇಕು. ಉಂಗ್ಲಿ ಚಿತ್ರದಲ್ಲಿ ಸಂಜಯ್ದತ್, ಕಂಗನಾ, ರಣದೀಪ್ ಹೂಡಾ ಹಾಗೂ ನೇಹಾ ಧೂಪಿಯಾ ನಟಿಸಲಿದ್ದಾರೆ. ಇಮ್ರಾನ್ ಹಶ್ಮಿ ಕೂಡಾ ಈ ಹಾಡಿನ ಒಂದು ವಿಶೇಷ ಭಾಗವಂತೆ. ಉಂಗ್ಲಿ ಚಿತ್ರವನ್ನು ರೆನ್ಸಿಲ್ ಡಿ ಸಿಲ್ವಾ ನಿರ್ದೇಶಿಸುತ್ತಿದ್ದಾರೆ. ಪುನೀತ್ ಮಲ್ಹೋತ್ರಾ ನಿರ್ದೇಶಿಸುತ್ತಿರುವ ಗೋರಿ ತೇರೆ ಪ್ಯಾರ್ ಮೆ ಚಿತ್ರದಲ್ಲೂ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರಂತೆ. ಕರೀನಾ ಕಪೂರ್ ಹಾಗೂ ಇಮ್ರಾನ್ ಖಾನ್ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.