Publish Date: Fri, 03 Aug 2007 (18:17 IST)
Updated Date: Fri, 03 Aug 2007 (18:16 IST)
ಪಾಲಿ ಭಾಷೆಯಲ್ಲೊಂದು ಸಿನೆಮಾ ಹೆಸರಾಂತ ಸಿನಿ ನಿರ್ದೇಶಕ ಶ್ಯಾಂ ಬೆನಗಲ್‌ರಿಂದ ತಯಾರಾಗಲಿದೆ. ಹೆಸರು ಗೌತಮ ಬುದ್ಧ.
ಪ್ರಸ್ತುತ ಸಿನಿಮವು ಹೆಸರೇ ಸೂಚಿಸುವಂತೆ ಗೌತಮ ಬುದ್ಧನ ಜೀವನ ಚರಿತ್ರೆಯ ಕಥಾನಕ ಹೊಂದಿರುತ್ತದೆ. ಶ್ರೀಲಂಕ ಸರ್ಕಾರ ಖರ್ಚುವೆಚ್ಚವನ್ನು ಭರಿಸಲಿದೆ. ಆ ದ್ವೀಪ ರಾಷ್ಟ್ರದಲ್ಲೇ ಚಿತ್ರೀಕರಣವೂ ನಡೆಯಲಿದೆ.
ಪ್ರಸ್ತುತ ಸಿನೆಮಾ ಭಾರತ ಹಾಗೂ ಶ್ರೀಲಂಕಾ ನಡುವಿನ ಬಾಂಧವ್ಯ ಕುದುರಿಸಲು ಉಪಯೋಗವಾಗಲಿದೆ ಎಂಬುದು ಪ್ರಾಯೋಜಕ ಶ್ರೀಲಂಕಾ ಸರ್ಕಾರಿ ಮೂಲಗಳ ಅಭಿಪ್ರಾಯ.