ಶ್ಯಾಮ್ ಬೆನಗಲ್ ಹೊಸ ಖೋಜ್ ಯಾವುದಂದ್ರೆ !
Publish Date: Mon, 14 Oct 2013 (18:25 IST)
Updated Date: Mon, 14 Oct 2013 (18:25 IST)
ಶ್ಯಾಮ್ ಬೆನಗಲ್ ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ. ಅವರು ಕೇವಲ ಹಿರಿತೆರೆಯಲ್ಲಿ ಮಾತ್ರವಲ್ಲ ಕಿರಿತೆರೆಯಲ್ಲೂ ಸಹ ತಮ್ಮ ಸಾಧನೆಯನ್ನು ತೋರಿದ್ದಾರೆ. 1980ರ ದಶಕದ ಭಾರತ್ ಏಕ್ ಖೋಜ್ ಟಿವಿ ಧಾರವಾಹಿ ಯನ್ನು ನಿರ್ದೇಶಿಸಿ ಭಾರತೀಯ ಟೀವಿ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಮತ್ತೊಮ್ಮೆ ನಿರ್ದೇಶಕ ಶ್ಯಾಮ್ ಬೆನಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಭಾರತದ ಸಂವಿಧಾನ ರಚಿಸಿದ ಬಗೆಯನ್ನು ಧಾರವಾಹಿಯ ಮೂಲಕ ಜನರಿಗೆ ತಿಳಿಯಪಡಿಸಲು ಮುಂದಾಗಿದ್ದಾರೆ.ಅದಕ್ಕೆ ಕಾರಣ ಅವರು ಇತ್ತಿಚೆಗಷ್ಟೇ ರಾಜಕೀಯ ರಂಗದಲ್ಲೂ ಮಿಂಚಿ ಬಂದಿದ್ದಾರೆ. ಬೆನಗಲ್ ಅವರು ರಾಜ್ಯ ಸಭೆಯ ಸದಸ್ಯರಾಗಿದ್ದರು (2006 ಮತ್ತು 2012). '
ನಾನು ಸಂವಿಧಾನದ ರಚನೆಯಾದ ಪ್ರಕ್ರಿಯೆಯನ್ನು ಚಿತ್ರವನ್ನಾಗಿ ಮಾಡಲು ಚಿಂತಿಸಿದೆ. ಸಂವಿಧಾನವು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪೂರ್ಣ ಪಠ್ಯ ಅಥವಾ ಯಾರು ಇದನ್ನು ಬರೆದರು ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಅದನ್ನು ವಿವರವಾಗಿ ತಿಳಿಸಿಲು ಪ್ರಯತ್ನಿಸುತ್ತೇನೆ' ಎಂದು ಶ್ಯಾಮ್ ಬೆನಗಲ್ ಹೇಳಿದ್ದಾರೆ.ಬೆನಗಲ್ ಅವರು 80ರ ದಶಕದಲ್ಲಿ ಜವಾಹರಲಾಲ್ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ಆಧರಿಸಿ ತೆಗೆದ ಚಿತ್ರ ಭಾರತ್ ಏಕ್ ಖೋಜ್ ದೂರದರ್ಶನದಲ್ಲಿ 53 ಕಂತುಗಳಲ್ಲಿ ಪ್ರಸಾರವಾಗಿ ಹೆಸರುವಾಸಿಯಾಗಿತ್ತು. ಈಗ ಅವರು ಚಿತ್ರಕಥೆಗಾರ, ನಿರ್ದೇಶಕ ಶಮಾ ಜೈದಿ ಸಹಭಾಗಿತ್ವದೊಂದಿಗೆ ಭಾರತದ ಸಂವಿಧಾನದ ಕುರಿತು ಹೊರತರುವ ಚಿತ್ರ 10 ಕಂತುಗಳನ್ನು ಒಳಗೊಂಡಿದೆ. ಇವರ ಈ ಪ್ರಯತ್ನ ಹೆಚ್ಚು ಜನಪ್ರಿಯತೆ ಗಳಿಸಲು ಸಾಕಷ್ಟು ಪ್ರಯತ್ನ ಪಡಬೇಕಿದೆ. ಕಾರಣ ಇಷ್ಟೇ ಎಂಬತ್ತರ ದಶಕದಲ್ಲಿ ಭಾರತದಲ್ಲಿ ಇದ್ದ ಚಾನೆಲ್ ದೂರದರ್ಶನ. ಆದರೆ ಈಗ ರಾಷ್ಟ್ರೀಯ ಚಾನೆಲ್ ಗಳಿರಲಿ, ಲೋಕಲ್ ಚಾನೆಲ್ ಗಳ ಭರಾಟೆ ಸಹ ಎದುರಿಸ ಬೇಕಿದೆ. ಬೆನಗಲ್ ಅವರ ಈ ಪ್ರಯತ್ನ ಜನ ಮೆಚ್ಚುಗೆ ಗಳಿಸಲಿ !