Publish Date: Sat, 16 Jun 2007 (16:48 IST)
Updated Date: Sat, 16 Jun 2007 (16:41 IST)
ಶೆರ್ಲಿನ್ ಚೋಪ್ರಾ ಎಂಬ ನಟಿ ಕಲಾವಿದೆ ಅಲ್ಲ ಜ್ಞಾಪಕ ಇರಲಿ. ಈಗ ಬಾಲಿವುಡ್‌ನಲ್ಲಿ ಎಲ್ಲರ ಗಮನ ತನ್ನ ಕಡೆಗೆ ಸೆಳೆದಿದ್ದಾಳೆ.
ಯಾರೂ ಕ್ಯಾರೇ ಮಾಡದಿದ್ದಾಗ ಹೇಗೆ ಮಾಡಬೇಕು ಅಂತ ಜೀನತ್ ಅಮಾನ್, ಮಲ್ಲಿಕಾ ಶೇರಾವತ್ ಹೇಳಿಕೊಟ್ಟಿರಬಹುದು ಇಲ್ಲ ಮಾಡಿ ತೋರಿಸಿರಬಹುದು.
ಶೇರ್ಲಿನ್ ಕೂಡ ಖುಲ್ಲಮ್ ಖುಲ್ಲ ಆಗಿ ಮಲ್ಲಿಕಾ ಹಾದಿ ಹಿಡಿದಿದ್ದರಿಂದಲೆ ನನಗೂ ಯಶಸ್ವಿಯಾದೆ ತೋಬಾ ತೋಬಾ ಕಲಿಸಿದ ಗುರುವಿಗೇ ತಿರುಮಂತ್ರ ಇಟ್ಟಳಲ್ಲ... ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿರುವ ರೆಡ್ ಸ್ವಸ್ತಿಕ್ ಎನ್ನುವ ಚಿತ್ರದಲ್ಲಿ ನಟನೆ ಇಲ್ಲದೆ ಭಯಂಕರ ಬಿಸಿ ಬಿಸಿ ದೃಶ್ಯಗಳಲ್ಲಿ ಶೆರ್ಲಿನ್ ಕಾಣಿಸಿಕೊಂಡಿದ್ದಾಳಂತೆ.
ಅದು ಹ್ಯಾಗೆ ಸೆನ್ಸಾರ್ ಕಣ್ಣಿತಪ್ಪಿಸಿಕೊಂಡು ಬಂದಿದೆಯೋ ಗೊತ್ತಿಲ್ಲ. ವಿನೋದ್ ಪಾಂಡೆ ಎನ್ನುವವರು ಈ ಚಿತ್ರದ ನಿರ್ಧೇಶನ ಮಾಡಿದ್ದಾರಂತೆ ವಿನೋದ್ ನಜದಿಕಿಯಾಂ, ಎಕ್ ಬಾರ್ ಫಿರ್ ಚಿತ್ರಗಳನ್ನು ನಿರ್ದೇಶಿಸಿದ್ದಾರಂತೆ.
ಹೆಸರು ಕೇಳಿದ್ದರೆ ಇಲ್ಲವೆ ಗ್ಯಾಪಕಕ್ಕೆ ಬಂದರೆ ನೀವೇ ಧನ್ಯರು. ಏಕೆಂದರೆ, ನಿಮ್ಮಷ್ಟು ಮೆಮರಿ ಪವರ್ ನಮಗಿಲ್ಲ. ರೆಡ್ ಸ್ವಸ್ತಿಕ್‌ನಲ್ಲಿ ಕಾಮದ ಬಲೆ ಬೀಸಿ ಹೇಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳುವ ಯುವತಿಯ ಕಥೆ ಇದೆಯಂತೆ... ಹೀಗಾಗಿ ಬಲೆಬೀಸುವ ಎಲ್ಲಾ ದೃಶ್ಯಗಳು ಇವೆಯಂತೆ! .