Publish Date: Fri, 20 Jul 2007 (10:20 IST)
Updated Date: Fri, 20 Jul 2007 (10:19 IST)
ನೇಹಾ ದುಪಿಯಾ ಅವರು ತಮ್ಮ ಹೊಸ ಚಿತ್ರ 'ಐ ಥಿಂಕ್ ಐ ಆಮ್ 24' ಚಿತ್ರೀಕರಣದ ವೇಳೆ ಕುಸಿದು ಬಿದ್ದ ಕಾರಣ , ಚಿತ್ರತಂಡ ಕೆಲಕಾಲ ಕಂಗೆಟ್ಟವರಂತೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಐ ಥಿಂಕ್... ಚಿತ್ರೀಕರಣದ ವೇಳೆ ಕೆಲದಿನಗಳ ಹಿಂದಷ್ಟೇ ಸಂಭವಿಸಿದ ಈ ಘಟನೆ ಅಷ್ಟೇನೂ ಸುದ್ದಿಯಾಗಿಲ್ಲ. ಆದರೂ ನೇಹಾ ಅವರು ಚೇತರಿಸಿಕೊಂಡು ಸೆಟ್‍ನಲ್ಲಿ ಮುಂದುವರಿದುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ನೆಲಕ್ಕೆ ಕುಸಿದ ನೇಹಾ ದುಪಿಯಾ ಅವರು ಕೆಲಕಾಲ ಪ್ರಜ್ಞಾಶೂನ್ಯರಾಗಿದ್ದರು. ಆದರೆ ತಕ್ಷಣ ನೆರವಿಗೆ ಧಾವಿಸಿದ ತಂಡದ ಎಲ್ಲರೂ ಶುಶ್ರೂಷಿಸಿದರು. ಕೆಲವೇ ಸಮಯದಲ್ಲಿ ನೇಹಾ ಉಸಿರಾಡಲಾರಂಭಿಸಿದರು. ಇದರಿಂದಾಗಿ ಚಿತ್ರೀಕರಣ 2 ತಾಸುಗಳ ಕಾಲ ಸ್ಥಗಿತಗೊಳಿಸಬೇಕಾಗಿಬಂತು.
ಬಾಲಿವುಡ್ನ ಬ್ಯುಸಿ ನಿರ್ದೇಶಕ-ನಿರ್ಮಾಪಕ ಸೌರಬ್ ಶುಕ್ಲಾ ಸ್ವತಃ ನೇಹಾ ಅವರ ರಕ್ಷಣೆಗೆ ಧಾವಿಸಿದುದು ವಿಶೇಷವಾಗಿತ್ತು. ಚೇತರಿಸಿದ ತಕ್ಷಣವೇ ನೇಹಾ ಚಿತ್ರಣಕ್ಕೆ ಸಿದ್ಧರಾದರು. ಸೆಟ್‌ನಲ್ಲಿರುವ ಎಲ್ಲರೂ ಸಾಂದರ್ಭಿಕವಾಗಿ ನೆರವಾದರು ಎಂಬುದು ನೇಹಾ ಅವರ ಪ್ರತಿಕ್ರಿಯೆಯಾಗಿತ್ತು.