ಶೀತಹವೆ ಸಹಿಸಿದ ಕರೀನಾ ಕಪೂರ್
Publish Date: Thu, 18 Oct 2007 (19:04 IST)
Updated Date: Thu, 18 Oct 2007 (19:02 IST)
ಇಮ್ತಿಯಾಜ್ ಅಲಿ ಅವರ ರೊಮ್ಯಾಂಟಿಕ್ ಹಾಸ್ಯ ಚಿತ್ರ "ಜಬ್ ವಿ ಮೆಟ್" ಚಿತ್ರೀಕರಣ ಹಿಮಾಲಯದ ಪರ್ವತಪ್ರದೇಶಗಳಲ್ಲಿ ನಡೆಯಿತು. ಮೈಕೊರೆಯುವ ಸಬ್ ಜೀರೊ ಉಷ್ಣಾಂಶ ಹೊಂದಿರುವ ಪ್ರಖ್ಯಾತ ರೋಹತಂಗ್ ಕಣಿವೆಯಲ್ಲಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಚಿತ್ರೀಕರಣದಲ್ಲಿ ಪಾಲ್ಗೊಂಡರು.ರೋಹತಾಂಗ್ ಕಣಿವೆ ಸಮುದ್ರ ಮಟ್ಟಕ್ಕಿಂತ 10,000 ಅಡಿ ಎತ್ತರದ ಶೀತಪ್ರದೇಶ. ಈ ಸ್ಥಳದಲ್ಲಿ ಇಮ್ತಿಯಾಜ್ ಮತ್ತು ಅವರ ಯೂನಿಟ್ ಜನಪ್ರಿಯ "ಯೆಹ್ ಇಷ್ಕ್"ನ ಜಾಡಿನಲ್ಲಿ ಒಂದು ಭಾಗವನ್ನು ಚಿತ್ರೀಕರಿಸಿದರು. ಚಿತ್ರೀಕರಣದ ಮೊದಲ ದಿನ ಅನೇಕ ಮಂದಿ ಯೂನಿಟ್ ಸದಸ್ಯರು ಸಹಿಸಲಸಾಧ್ಯವಾದ ಶೀತಹವೆಯಲ್ಲಿ ಕುಸಿದುಬಿದ್ದರು. ಆದರೆ ಶಹೀದಾ ಮತ್ತು ಕರೀನಾ ಶೀತಹವೆಯನ್ನು ತಡೆದುಕೊಂಡರು. ಬಹುಷಃ ಶೀತ ಹವೆಯಲ್ಲೂ ಬೆಚ್ಚಗಿನ ಬಿಸಿ ಮಾತುಗಳಿಂದ ಅವರಿಗೆ ಚೇತರಿಕೆ ಉಂಟಾಗಿರಬಹುದು.