Publish Date: Thu, 19 Jul 2007 (10:26 IST)
Updated Date: Thu, 19 Jul 2007 (10:24 IST)
ಬಿಗ್‌ಬ್ರದರ್ ಜನಾಂಗೀಯ ವಿವಾದ, ಮತ್ತೊಂದು ರಿಚರ್ಡ್ ಗೇರ್ ಅವರ ಅಂತಾರಾಷ್ಟ್ರೀಯ ಕಿಸ್ ಪ್ರಮಾದಗಳಿಂದ ಬಹಳಷ್ಟು ಹೆಸರನ್ನು ಅಯಾಚಿತವೆಂಬಂತೆ ಪಡೆದಿರುವ ಹಾಲಿವುಡ್‌ಗೇರಿರುವ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಗೆ ಇನ್ನು ಡಾ.ಶಿಲ್ಪಾಶೆಟ್ಟಿಯಾಗಲಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಇಂಗ್ಲೆಂಡ್ ಲೀಡ್ಸ್ ಮೆಟ್ರೋ ಪಾಲಿಟನ್ ವಿಶ್ವವಿದ್ಯಾಲಯವು ಈ ನಿರ್ಧಾರ ಸ್ವೀಕರಿಸಿದೆ. ಶಿಲ್ಪಾಶೆಟ್ಟಿಗೆ ಡಾಕ್ಟರೇಟ್ ನೀಡಿ ಗೌರವಿಸುವ ಕಾರ್ಯಕ್ರಮ ಶೀಘ್ರಜರುಗಲಿದೆ. ಶಿಲ್ಪಾಗೆ ಈಗ ಅವಕಾಶಗಳು, ಪ್ರತಿಷ್ಠೆ, ಖ್ಯಾತಿ ತನ್ನಷ್ಟಕ್ಕೆ ಎಂಬಂತೆ ಹರಿದು ಬರತೊಡಗಿದೆ.
ಶಿಲ್ಪಾ ಅವರ ಜನಪ್ರಿಯತೆ ಹಾಗೂ ಯಶಸ್ಸನ್ನು ಗುರುತಿಸಿ ಅವರಿಗೆ ಪ್ರತಿಷ್ಠಿತ ಡಾಕ್ಟರೇಟ್ ಗೌರವ ನೀಡಲಾಗುತ್ತಿದೆ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಪ್ರಸ್ತುತ ಪುರಸ್ಕಾರ ಪಡೆಯುತ್ತಿರುವ ಅತಿಕಿರಿಯ ಬಾಲಿವುಡ್ ತಾರೆ ಎಂಬ ಹಿರಿಮೆಯೂ ಶಿಲ್ಪಾರ ಪಾಲಿಗೆ ಒದಗಿಬರಲಿದೆ.
ಡಾಕ್ಟರೇಟ್ ಪದವಿ ಲಭಿಸುವ ವಿಷಯ ತಿಳಿದಾಗ ಶಿಲ್ಪಾ ಖುಷಿ,ಸಂಭ್ರಮಗಳಿಂದ ಕುಣಿದಾಡಿದರು. ಇದು ತನಗೆ ಪರಮಾಶ್ಚರ್ಯದ ವಿಷಯ ಎಂದವರು ಪ್ರತಿಕ್ರಿಯಿಸಿದ್ದಾರೆ. ಹಾಲಿವುಡ್‌ನಲ್ಲೀಗ ಶಿಲ್ಪಾ ಜನಪ್ರಿಯರಾಗುತ್ತಿದ್ದಾರೆ. ಬೇಡಿಕೆ ಹೆಚ್ಚುತ್ತಿದೆ. ಶಿಲ್ಪಾ ಮೇನಿಯಾ ಬೆಳೆಯತೊಡಗಿದೆ.
ಪ್ರಸ್ತುತ ಲೀಡ್ಸ್ ವಿ ವಿ ಯ ಡಾಕ್ಟರೇಟ್ ಗೌರವವು ಈ ಮೊದಲು ಬಾಲಿವುಡ್‌ನ ಹಿರಿಯ ತಾರೆಯರಾದ ಬಿಗ್ ಬಿ ಅಮಿತಾಬ್ ಬಚನ್, ಫೈರ್, ವಾಟರ್ ಮುಂತಾದ ವಿವಾದಿತ ಚಿತ್ರಗಳ ನಾಯಕಿ ಶಬಾನಾ ಆಜ್ಮಿ ಇವರಿಗೆ ಲಭಿಸಿತ್ತು.