ಶಿಲ್ಪಾಶಿಟ್ಟಿ ಪರಿಮಳ ಹಂಚತ್ತಿದ್ದಾಳೆ!
Publish Date: Thu, 14 Jun 2007 (17:06 IST)
Updated Date: Thu, 14 Jun 2007 (17:06 IST)
ಲಂಡನ್‌ನಗರದ ಕೇಂದ್ರಭಾಗದಲ್ಲಿರುವ ಐಷರಾಮಿ ಹೊಟೇಲ್‌ನಲ್ಲಿ ಶಿಲ್ಪಾ ಶೆಟ್ಟಿ ಕೈಯಲ್ಲೊಂದು ಪುಟ್ಟ ಬಾಟಲಿ ಹಿಡಿದು ನಿಂತಿದ್ದಾಳೆ. ಅದು ಆಕೆ ರಾಯಭಾರಿಯಾಗಿರುವ ಹೊಸ ಸುಗಂಧ ದ್ರವ್ಯ 'ಎಸ್ 2' ಬಿಡುಗಡೆ ಸಮಾರಂಭ.ರಾಜೇಂದ್ರ ಕುಂದ್ರ ಅವರು ಪ್ರಸ್ತುತ ಸುಗಂಧದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಹರಿಸುತ್ತಿದ್ದಾರೆ. ಅದರ ಬಗ್ಗೆ ಮಾಹಿತಿ ನೀಡಿದ ಶಿಲ್ಪಾ ಇದೊಂದು ವಿಭಿನ್ನ ಸುಗಂಧ ದ್ರವ್ಯ. ಇದನ್ನು ಲೇಪಿಸಿದರೆ ಅವಿಸ್ಮರಣೀಯ ಸುವಾಸನೆ ನಮ್ಮ ದೇಹದಿಂದ ಇತರರಿಗೆ ಲಭಿಸುತ್ತದೆ ಎಂದರು.ಜಾಜಿ ಹಾಗೂ ಸಿಂಬೆ ಸುವಾಸನೆ ಬೆರೆತಿರುವ ಈ ಸುಗಂಧ ದ್ರವ್ಯ ಹೊಸ ಆಯಾಮ ನೀಡಲಿದೆ ಎಂಬುದು ಶಿಲ್ಪಾ ಅಭಿಪ್ರಾಯ. ಪರಿಮಳ ಎನ್ನುವುದು ಮಹಿಳೆಗೆ ನಿಸರ್ಗ ನೀಡಿದ ವರದಾನ, ಆದರೂ ಎಸ್-2 ಮಹಿಳೆಯ ಹೆಣ್ತನಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂದರು ಶಿಲ್ಪಾ.ಶ್ರೀಗಂಧ, ಜಾಜಿಹೂಗಂಧ ಸೇರಿದಂತೆ ವಿವಿಧ ಪರಿಮಳಗಳಲ್ಲಿ ಲಭಿಸುವ ಎಸ್2 ಸುಗಂಧ ದ್ರವ್ಯವು ಇಂಗ್ಲಂಡ್ ಮಾರುಕಟ್ಟೆಗೆ ಜುಲೈ ವೇಳೆಗೆ ಬಿಡುಗಡೆ ಗೊಳ್ಳಲಿದೆ ಎಂದು ಶಿಲ್ಪಾ ತಿಳಿಸಿದರು.