Select Your Language

Notifications

webdunia
webdunia
webdunia
webdunia

ಶಿಲ್ಪ ಶೆಟ್ಟಿಗೆ ರಾಜಕೀಯಕ್ಕೆ ಬರೋಕೆ ಮನಸ್ಸಿಲ್ಲವಂತೆ..

ಶಿಲ್ಪ ಶೆಟ್ಟಿ
, ಬುಧವಾರ, 5 ಫೆಬ್ರವರಿ 2014 (09:49 IST)
PR
ಬಾಲಿವುಡ್ ನ ಹಾಟ್ ಬ್ಯೂಟಿಗಳಲ್ಲಿ ಒಬ್ಬರಾಗಿರುವ ಶಿಲ್ಪ ಶೆಟ್ಟಿ ಕುಂದ್ರ ಅವರಿಗೆ ರಾಜಕೀಯದ ಬಗ್ಗೆ ಹೆಚ್ಚೇನೂ ಹಾಗೆನ್ನುವುದಕ್ಕಿಂತ , ಸ್ವಲ್ಪವೂ ಇಷ್ಟ ಇಲ್ಲವಂತೆ, ಆಸಕ್ತಿ ಸಹ ಇಲ್ಲವಂತೆ ಹಾಗೆಂದು ಹೇಳಿದ್ದಾರೆ. ಇತ್ತೀಚಿಗೆ ವಾರಾಣಾಸಿಯಲ್ಲಿ ಸ್ಪಾವನ್ನು ಬಿಡುಗಡೆ ಮಾಡುವ ಸಮಯದಲ್ಲಿ ಈ ಸಂಗತಿ ತಿಳಿಸಿದರು.

ಈ ಸಮಯದಲ್ಲಿ ಈ ಮುವ್ವತ್ತೆಂಟರ ಹರೆಯದ ಚೆಲುವೆ ಬಳಿ ಮುಂದಿನ ಪ್ರಧಾನಿ ಯಾರಾದರೆ ಸರಿ ಅನ್ನುವ ಪ್ರಶ್ನೆ ಕೇಳಿದಾಗ , ಯಾರನ್ನು ಹೆಸರಿಸದೆ ಸಾಮಾನ್ಯ ಮನುಷ್ಯನಿಗೆ ಈ ಸ್ಥಾನ ಪಡೆಯಲು ಅವಕಾಶ ನೀಡ ಬೇಕು ಎನ್ನುವ ಮಾತನ್ನು ಈ ಸಮಯದಲ್ಲಿ ತಿಳಿಸಿದರು.

ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಇರುವವನು ಮಾತ್ರ ಈ ಹುದ್ದೆಯನ್ನು ಅಲಂಕರಿಸ ಬೇಕು ಎನ್ನುವ ಮಾತನ್ನು ಸಹ ಈ ಸಮಯದಲ್ಲಿ ಹೇಳಿದ್ದಾರೆ. ಸಾಮಾನ್ಯವಾಗಿ ಸ್ವಲ್ಪ ಯಶಸ್ಸು ಕಂಡರೆ ಸಾಕು ರಾಜಕೀಯದ ಕಡೆ ಮುಖ ಮಾಡುವ ವರಿಗಿಂತ ಈಕೆ ಸ್ವಲ್ಪ ಭಿನ್ನ ಅಂತಾಯಿತು.

Share this Story:

Follow Webdunia kannada