Article Bollywood Gossips %e0%b2%b6%e0%b2%be%e0%b2%b9%e0%b3%80%e0%b2%a6%e0%b3%8d %e0%b2%b9%e0%b3%81%e0%b2%ae%e0%b2%be %e0%b2%96%e0%b3%81%e0%b2%b0%e0%b3%87%e0%b2%b6%e0%b2%bf %e0%b2%97%e0%b2%be%e0%b2%b8%e0%b2%bf%e0%b2%aa%e0%b3%8d %e0%b2%b6%e0%b2%be%e0%b2%b9%e0%b3%80%e0%b2%a6%e0%b3%8d %e0%b2%ac%e0%b3%87%e0%b2%b8%e0%b2%b0 113072000028_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾಹೀದ್-ಹುಮಾ ಖುರೇಶಿ ಗಾಸಿಪ್: ಶಾಹೀದ್ ಬೇಸರ

ಶಾಹೀದ್ ಕಪೂರ್
PR
PR
ಶಾಹೀದ್ ಕಪೂರ್ಗೆ ಅಭಿಮಾನಿಗಳು ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆತ ಎಲ್ಲೇ ಹೋದರೂ ಅಭಿಮಾನಿಗಳು ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳು ಮುತ್ತಿಕೊಳ್ಳುವುದು ಸಾಮಾನ್ಯ ವಿಷಯವೇ.

ಆದರೆ ಮತ್ತೆ ಮತ್ತೆ ಹರಡುತ್ತಿರುವ ಗಾಸಿಪ್ ಬಗ್ಗೆ ಶಾಹೀದ್ ಕೊಂಚ ಅಸಮಾಧಾನ ತೋರಿದ್ದಾರೆ. ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಹುಡುಗಿ ಹುಮಾ ಖುರೇಶಿ ಜೊತೆ ಶಾಹೀದ್ ಕಪೂರ್ ಹೆಸರು ಥಳುಕು ಹಾಕಿಕೊಂಡಿದೆಯಂತೆ. ಇವರಿಬ್ಬರಿಗೆ ಲಿಂಕ್ ಇದೆ ಎಂಬ ಸುದ್ದಿ ಹರಡುತ್ತಲೇ ಅವರು ಸ್ವಲ್ಪ ಗರಂ ಆಗಿದ್ದಾರೆ. ನಾನು ಈವರೆಗೆ ಆಕೆಯನ್ನು ಭೇಟಿ ಮಾಡಿದ್ದು ಎರಡು ಬಾರಿ ಮಾತ್ರ. ಅದು ಬಿಟ್ಟರೆ ನಮ್ಮಿಬ್ಬರ ಮಧ್ಯೆ ಬೇರೇನು ಇಲ್ಲ ಎಂದು ಉತ್ತರಿಸಿದ್ದಾರೆ.

ಈ ರೀತಿ ಗಾಸಿಪ್ ಹಬ್ಬಿಸುವುದರಿಂದ ನನಗೇನೂ ಅಡ್ಡಿಯಿಲ್ಲ. ಆದರೆ ಆಕೆ ಹೆಣ್ಣು ಮಗಳು. ಎಷ್ಟೇ ಮಾಡ್ ಆಗಿದ್ದರೂ ಭವಿಷ್ಯಕ್ಕೆ ತೊಂದರೆಯಾಗುವಂತೆ ನಡೆದುಕೊಳ್ಳಬಾರದು. ಈ ಗಾಸಿಪ್ನಿಂದ ಆಕೆಯ ವೈಯಕ್ತಿಕ ಬದುಕಿಗೆ ತೊಂದರೆ ಆಗಬಾರದಲ್ಲಾ ಎಂದು ಹೇಳುವ ಮೂಲಕ ಕಾಳಜಿ ಮೆರೆದಿದ್ದಾರೆ.

ಮಾಧ್ಯಮದವರು ಬರೆಯುವ ಮುನ್ನ ಕೊಂಚ ವಿಚಾರ ಮಾಡಿ. ಈಗಿನ ನಟರು ಒಬ್ಬಂಟಿಯಾಗಿರುವುದೇ ಕಷ್ಟ. ಹಾಗಾದ ಕೂಡಲೇ ಯಾರ ಜೊತೆಗಾದರೂ ನಮ್ಮ ಹೆಸರನ್ನು ಸೇರಿಸಿಬಿಡುತ್ತಾರೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada