ಶಾಹಿದ್‌ಗೆ ಹಾಡು ಹೇಳುವ ಸರದಿ
Publish Date: Tue, 23 Oct 2007 (18:19 IST)
Updated Date: Tue, 23 Oct 2007 (18:18 IST)
"
ರೈಲ್ ಗಾಡಿ, ರೈಲ್ ಗಾಡಿ ಚುಕ್, ಚುಕ್, ಚುಕ್ ಚುಕ್" ಈಗ ಹಾಡು ಹೇಳುವ ಸರದಿ ಶಾಹಿದ್‌ಗೆ ಬಂದಿದೆ. ಸೋಮವಾರ ಸಂಜೆ ಆಮ್ಚಿ ಲೋಕಲ್ ರೈಲು ಗಾಡಿಯಲ್ಲಿ ಪ್ರಯಾಣ ಮಾಡಿದ ಶಾಹಿದ್ ಸಹಪ್ರಯಾಣಿಕರ ಜತೆ ಚ್ಯಾಟ್ ಮಾಡಿದರು. ಜಬ್ ವಿ ಮೆಟ್ ಚಿತ್ರದಲ್ಲಿ ಆದಿತ್ಯ ಹಾಗೂ ಗೀತ್ ಪಾತ್ರದಲ್ಲಿ ಶಾಹಿದ್ ಮತ್ತು ಕರೀನಾ ಪ್ರಯಾಣಿಸುತ್ತಿದ್ದ ರೈಲು ತಪ್ಪಿಹೋಗಿ ವಿವಿಧ ರೀತಿಯಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಚಿತ್ರದ ಪ್ರಚಾರವನ್ನು ಸ್ಥಳೀಯ ರೈಲನ್ನು ಬಳಸಿ ಮಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಜಬ್ ವಿ ಮೆಟ್ ವಿನ್ಯಾಸದೊಂದಿಗೆ ಪಶ್ಚಿಮ ಮತ್ತು ಮಧ್ಯ ರೈಲ್ವೆಯ ಎರಡು ಸ್ಥಳೀಯ ರೈಲುಗಳಿಗೆ ನಿರ್ಮಾಪಕರು ಬಣ್ಣಬಳಿದು ಚಿತ್ರೀಕರಿಸಿದ್ದಾರೆ.