Article Bollywood Gossips %e0%b2%b6%e0%b2%be%e0%b2%b9%e0%b2%bf%e0%b2%a6%e0%b3%8d%e2%80%8c%e0%b2%97%e0%b3%86 %e0%b2%b0%e0%b2%be%e0%b2%9c%e0%b3%80%e0%b2%b5%e0%b3%8d %e0%b2%97%e0%b2%be%e0%b2%82%e0%b2%a7%e0%b2%bf %e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf 109072100029_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾಹಿದ್‌ಗೆ ರಾಜೀವ್ ಗಾಂಧಿ ಪ್ರಶಸ್ತಿ

ಶಾಹಿದ್ ಕಪೂರ್
IFM
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಬಾದ್‌ಶಾಹ್ ಶಾರುಖ್ ಖಾನ್, ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್, ಉದ್ಯಮ ಜಗತ್ತಿನ ಮುಖೇಶ್ ಅಂಬಾನಿ, ಅಂತರಿಕ್ಷ ವಿಜ್ಞಾನಿ ಸುನೀತಾ ವಿಲಿಯಮ್ಸ್, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ... ಈ ಎಲ್ಲ ಕೆಲವೇ ಕೆಲವು ಸಾಧಕರ ಪಟ್ಟಿಯಲ್ಲಿ ಒಬ್ಬ ಪುಟ್ಟ ಚಾಕೋಲೇಟ್ ಹೀರೋ ಕೂಡಾ ಸೇರಲಿದ್ದಾನೆ. ಅದ್ಯಾರು ಗೊತ್ತಾ? ಅದೇ ಕರೀನಾಳ ಮಾಜಿ ಪ್ರೇಮಿ ಸುಂದರಾಂಗ ಶಾಹಿದ್ ಕಪೂರ್!

ಶಾಹಿದ್‌ನಂತಹ ಯುವ ನಟ ಈ ಗಣ್ಯಾತಿಗಣ್ಯರೊಂದಿಗೆ ಸ್ಥಾನ ಪಡೆದುದು ಹೇಗೆ ಗೊತ್ತಾ? ಈ ಎಲ್ಲ ಗಣ್ಯರೂ ಪಡೆದ ಪ್ರತಿಷ್ಠಿತ ರಾಜೀವ್ ಗಾಂಧಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿದ್ದು ಯುವ ಉತ್ಸಾಹಿ ನಟ ಶಾಹಿದ್ ಕಪೂರ್.

ಕೇವಲ 28ರ ಹರೆಯದ ಚೆಲುವಾಂತ ಚೆನ್ನಿಗ ಶಾಹಿದ್‌ಗೆ ಸ್ವತಃ ಈ ಸುದ್ದಿ ಕೇಳಿ ನಂಬಲಿಕ್ಕೇ ಆಗಲಿಲ್ಲವಂತೆ. ಅಷ್ಟೊಂದು ಮಹಾನ್ ಸಾಧಕರ ಪಟ್ಟಿಯಲ್ಲಿ ಕೇವಲ 28 ತುಂಬಿದ ನನ್ನಂಥ ಹುಡುಗನೂ ಸೇರೋದಾ ಅಂತ ಆಶ್ಚರ್ಯ ತುಂಬಿದ ಕಣ್ಣುಗಳಲ್ಲಿ ಅದೇ ವಿನಯವಂತಿಕೆಯಲ್ಲಿ ಹೇಳುತ್ತಾನೆ ಶಾಹಿದ್. ಜತೆಗೆ ಪ್ರಶಸ್ತಿಗೆ ತಾನು ಉತ್ತಮ ನಟನೆಂದು ಆಯ್ಕೆಯಾಗಿದ್ದು ಖುಷಿ ತಂದಿದೆ. ಖುಷಿಗಿಂತಲೂ ಹೆಚ್ಚು ಆಶ್ಚರ್ಯವಾಗಿದೆ. ಇದು ನನ್ನ ವೃತ್ತಿ ಬದುಕಿನ ಆರಂಭವಷ್ಟೇ ಎನ್ನುತ್ತಾರೆ ಶಾಹಿದ್.

ಹೌದು. ಸರ್ಕಾರ ನೀಡುವ ಈ ಬಾರಿಯ ಪ್ರತಿಷ್ಠಿತ 12ನೇ ರಾಜೀವ್ ಗಾಂಧಿ ಪ್ರಶಸ್ತಿಯ ಪಟ್ಟಿಯಲ್ಲಿ ಉತ್ತಮ ನಟನಾಗಿ ಶಾಹಿದ್ ಕಪೂರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ ಎರಡನೇ ವಾರದಲ್ಲಿ ಮುಂಬೈನಲ್ಲಿ ನಡೆಯಲಿದೆ.

ಪಂಕಜ್ ಕಪೂರ್ ಎಂಬ ನಟನ ಮಗನಾದ ಶಾಹಿದ್ ಸಣ್ಣವನಿದ್ದಾಗಲೇ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡವರು. ಶಾಹಿದ್ ಹಾಗೂ ನಟಿ ಆಯೇಷಾ ಟಕಿಯಾ ಆರೇಳರ ಹರೆಯದಲ್ಲಿದ್ದಾಗ ನಟಿಸಿದ ಕಾಂಪ್ಲಾನ್ ಜಾಹಿರಾತು ಈಗಲೂ ಪ್ರಖ್ಯಾತಿ ಪಡೆದಿದೆ. ಐ ಆಮ್ ಎ ಕಾಂಪ್ಲಾನ್ ಬಾಯ್ ಎನ್ನುವ ಶಾಹಿದ್ ಜತೆಗೆ ಆಯೇಷಾ ಐ ಆಮ್ ಎ ಕಾಂಪ್ಲಾನ್ ಗರ್ಲ್ ಎನ್ನುತ್ತಾಳೆ. ಬಹುತೇಕ ಮಕ್ಕಳೂ ಸೇರಿದಂತೆ ಹಿರಿಯರ ಮನಮೆಚ್ಚಿದ ಜಾಹಿರಾತು ಇದು. ಮಾಡೆಲಿಂಗ್‌ನಲ್ಲೂ ಸಾಕಷ್ಟು ಪಳಗಿದ್ದ ಶಾಹಿದ್ ಇಶ್ಕ್ ವಿಶ್ಕ್, ವಿವಾಹ್‌ನಂತಹ ಹಿಟ್ ಚಿತ್ರಗಳ ನಂತರ ನೀಡಿದ ಜಬ್ ವಿ ಮೆಟ್ ಮೆಗಾ ಹಿಟ್ ಆಯಿತು. ಜಬ್ ವಿ ಮೆಟ್ ಶಾಹಿದ್‌ ವೃತ್ತಿ ಬದುಕಿಗೆ ಬ್ರೇಕ್ ನೀಡಿತು. ಈಗ ಕಮೀನೇಯಂತಹ ಬಹುನೀರೀಕ್ಷೆಯ ಚಿತ್ರಗಳೂ ಶಾಹಿದ್ ಕೈಯಲ್ಲಿವೆ.
webdunia
IFM

Share this Story:

Follow Webdunia kannada