ಶಾಹಿದ್-ಪ್ರಿಯಾಂಕಾ ಗಪ್‌ಚುಪ್ ಪ್ರಣಯ ಬಹಿರಂಗ
'
ಕಮೀನೇ' ಚಿತ್ರ ಕಿಸ್ಸಿಂಗ್ ಸೀನ್ ಪರಿಣಾಮವೋ ಗೊತ್ತಿಲ್ಲ. ಹೇಳಿ ಕೇಳಿ ಶಾಹಿದ್, ಪ್ರಿಯಾಂಕಾ ಇಬ್ಬರದೂ ಈ ಮೊದಲಿನದ್ದು ವಿಫಲ ಪ್ರೇಮ ಪ್ರಕರಣ. ಕಮೀನೇಯಿಂದ ಆರಂಭವಾದ ಗೆಳೆತನ ಮೆಲ್ಲಗೆ ಮೇರೆ ಮೀರಲು ಶುರುವಾಗಿದೆ ಎಂಬುದು ಎಲ್ಲರ ಊಹಾಪೋಹ. ನಿನ್ನೆ ಮೊನ್ನೆಯವರೆಗೂ ಗಾಸಿಪ್ಪಿಗರಿಗೆ ಆಹಾರವಾಗದಿರಲು ಕದ್ದು ಮುಚ್ಚಿ ಜತಗೆ ಓಡಾಡುತ್ತಿದ್ದ ಶಾಹಿದ್ ಕಪೂರ್ ಪ್ರಿಯಾಂಕಾ ಛೋಪ್ರಾ ಜೋಡಿ ಇದೀಗ ತಮ್ಮ ರೊಮ್ಯಾನ್ಸ್‌ನ್ನು ಸಾರ್ವಜನಿಕವಾಗಿ ಅಧಿಕೃತಗೊಳಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಕಳೆದ ಶನಿವಾರ ನಿರ್ಮಾಪಕ ಕರಿಮ್ ಮೊರಾನಿ ಅವರ 50ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಪ್ರಿಯಾಂಕಾ ಛೋಪ್ರಾರ ಬಿಳಿ ಮರ್ಸಿಡಸ್ ಕಾರನ್ನು ಶಾಹಿದ್‌ರ ಸಿಲ್ವರ್ ಮರ್ಸಿಡಸ್ ಕಾರು ಹಿಂಬಾಲಿಸಿರುವುದೇ ಈ ಗಾಸಿಪ್ಪು ಹರಡಲು ಕಾರಣ.ಆಗಿದ್ದಿಷ್ಟು. ಪ್ರಿಯಾಂಕ ಪಾರ್ಟಿಯಲ್ಲಿ ಅವರ ಫ್ರೆಂಡ್ ಜತೆಗಿದ್ದರು. ಆಗ ಸುಮಾರು ಮಧ್ಯರಾತ್ರಿ ಒಂದು ಗಂಟೆಯ ಸಮಯಕ್ಕೆ ಶಾಹಿದ್ ಬಂದರು. ಪಾರ್ಟಿಯಲ್ಲಿ ಪ್ರಿಯಾಂಕಾರನ್ನು ಕರೆದ ಶಾಹಿದ್ ಸ್ವಲ್ಪ ಹೊತ್ತು ಎಲ್ಲರೊಡನೆ ಮಾತನಾಡಿ ನಂತರ ಅವರಿಬ್ಬರೂ ಸ್ವಲ್ಪ ಏಕಾಂತವಿರುವ ಮೂಲೆಯ ಸ್ಥಳವೊಂದರಲ್ಲಿ ಕುಳಿತು ಸಣ್ಣ ಸ್ವರದಲ್ಲಿ ಮಾತನಾಡುತ್ತಿದ್ದರು. ಇಬ್ಬರೂ ಮಾತಿನಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಸುಮಾರು ಬೆಳಿಗ್ಗೆ ಐದು ಗಂಟೆಯವರೆಗೂ ಪ್ರಪಂಚದ ಅರಿವೇ ಇಲ್ಲದಂತೆ ಮಾತನಾಡುತ್ತಿದ್ದರು. ಸಣ್ಣಗೆ ತಮ್ಮೊಳಗೇ ನಗುತ್ತಿದ್ದರು ಎಂದು ಪಾರ್ಟಿಯಲ್ಲಿ ಭಾಗವಹಿಸಿದ ಅತಿಥಿಗಳು ಹೇಳುತ್ತಾರೆ.
ಹೊರಡುವ ಸಮಯ ಬಂದಾಗ ಪ್ರಿಯಾಂಕ, ಪ್ರಿಯಾಂಕರ ಫ್ರೆಂಡ್ ಹಾಗೂ ಶಾಹಿದ್ ಮೂವರೂ ಪ್ರಿಯಾಂಕಾರ ಬಿಳಿ ಮರ್ಸಿಡಸ್ (ಎಂಎಚ್-02 ಬಿಜಿ 6345) ಕಾರಲ್ಲಿ ಕೂತರು. ಶಾಹಿದ್ ಅವರ ಸಿಲ್ವರ್ ಬಣ್ಣದ ಮರ್ಸಿಡಸ್ (ಎಂಎಚ್-02 ಎಕ್ಯು 4244) ಕಾರಿನಲ್ಲಿ ಶಾಹಿದ್ ಅವರ ಡ್ರೈವರ್ ಪ್ರಿಯಾಂಕಾರ ಕಾರನ್ನು ಹಿಂಬಾಲಿಸಿದರು. ಪ್ರಿಯಾಂಕ ತುಂಬ ಖುಷಿಯಲ್ಲಿದ್ದಂತೆ ಕಾಣುತ್ತಿದ್ದರು. ಅವರು ಶಾಹಿದ್ ಅವರ ಪ್ರೀತಿಯ ಬಲೆಗೆ ಬಿದ್ದಂತೆ ಕಂಡುಬರುತ್ತಿತ್ತು. ಆದರೆ, ಶಾಹಿದ್‌ಗೆ ಇಷ್ಟು ಬೇಗ ಇದನ್ನು ಜಗಜ್ಜಾಹೀರು ಮಾಡುವುದು ಬೇಕಿರಲಿಲ್ಲ ಅಂತನಿಸುತ್ತದೆ. ಯಾಕೆಂದರೆ, ಅವರು ಹಾಗೆ ಜತೆಯಲ್ಲಿ ಸಾಗುವಾಗ ಕ್ಯಾಮರಾಗಳು ಕ್ಲಿಕ್ಕಿಸಲು ಶುರುವಾಯಿತು. ಶಾಹಿದ್ ಆಗಾಗ ಕ್ಯಾಮರಾದ ಉಪಟಳ ತಾಳಲಾರದೆ ಮುಖ ಮುಚ್ಚಿಕೊಳ್ಳುತ್ತಿದ್ದರು ಎನ್ನಲಾಗಿದೆ.ಮೂಲಗಳ ಪ್ರಕಾರ ಶಾಹಿದ್ ಹಾಗೂ ಪ್ರಿಯಾಂಕರ ಲವ್ ಸ್ಟೋರಿಗೆ ಈಗ ರೆಕ್ಕೆ-ಪುಕ್ಕ ಬಲಿಯ ತೊಡಗಿದೆ. ಪ್ರೇಮ ಹಕ್ಕಿ ಮೆಲ್ಲನೆ ರೆಕ್ಕೆ ಬಿಚ್ಚಿ ಹಾರಲು ರೆಡಿಯಾಗಿದೆ ಎಂಬುದು ಉದ್ಯಮದಲ್ಲಿನ ಗುಸುಗುಸು. ಕೇವಲ ಪಾರ್ಟಿಯಲ್ಲಿ ಅವರಿಬ್ಬರು ಜತೆಗೆ ಮಾತಾಡಿದ್ದುದಷ್ಟೇ ಅಲ್ಲ ಇದಕ್ಕೆ ಕಾರಣ. ಹಲವು ದಿನಗಳಿಂದ ಕೆಲವರು ಇವರಿಬ್ಬರನ್ನು ಗಮನಿಸಿದ್ದಾರೆ. ಶಾಹಿದ್ ಹಾಗೂ ಪ್ರಿಯಾಂಕ ಇರುವುದು ಮುಂಬೈನ ಒಂದೇ ಫ್ಲ್ಯಾಟ್‌ನಲ್ಲಿ. ರಾಜ್ ಕ್ಲಾಸಿಕ್ ಎಂಬ ಈ ಫ್ಲ್ಯಾಟ್‌ನಲ್ಲಿ ಪ್ರಿಯಾಂಕ ಹಾಗೂ ಶಾಹಿದ್ ಮಧ್ಯರಾತ್ರಿಯಾದ ನಂತರ ತಮ್ಮ ಮನೆಯಿಂದ ಕೆಳಗಿಳಿದು ಗ್ರೌಂಡ್ ಫ್ಲೋರಿಗೆ ಬರುತ್ತಾರೆ. ಕೈಕೈ ಹಿಡಿದು ಗಂಟೆಗಟ್ಟಲೆ ಕೆಳಗಿನ ಲಾನ್‌ನಲ್ಲಿ ಕೂತು ಹರಟುತ್ತಾರೆ. ಬೇರೆ ಹೊತ್ತಿನಲ್ಲಿ ಅವರಿಗೆ ಅಲ್ಲಿ ಏಕಾಂತ ಸಿಗುವುದಿಲ್ಲವಾದ್ದರಿಂದ ಮಧ್ಯರಾತ್ರಿಯಲ್ಲೇ ಅವರಿಬ್ಬರು ತಮ್ಮ ಫ್ಲ್ಯಾಟ್‌ನಲ್ಲಿ ಭೇಟಿಯಾಗುತ್ತಾರೆ ಎಂಬುದು ಹಲವರ ಅನಿಸಿಕೆ.ಪ್ರಿಯಾಂಕಾರನ್ನು ನೋಡಿದರೆ ಶಾಹಿದ್ ಪ್ರೇಮದ ಹೊಡೆತ ಸ್ವಲ್ಪ ಪರಿಣಾಮ ಬೀರಿದಂತೆ ತೋರುತ್ತದೆ ಎನ್ನುತ್ತವೆ ಮೂಲಗಳು. ಆದರೆ, ಮೊದಲು ಶಾಹಿದ್- ಕರೀನಾ ಮೊದಲು ಸುತ್ತಾಡುತ್ತಿದ್ದಾಗ ಪ್ರಿಯಾಂಕಾ- ಹರ್ಮಾನ್ ಜೋಡಿಯೂ ಅವರಿಗೆ ಒಂದು ಬಾರಿ ಸಾಥ್ ನೀಡಿದ್ದರಂತೆ. ಈ ಎರಡು ಜೋಡಿಗಳು ಆಗ ತಮ್ಮ ರಜೆಯನ್ನು ಒಂದೇ ಜಾಗದಲ್ಲಿ ಕಳೆದಿದ್ದರಂತೆ. ಈಗ ಇಬ್ಬರ ಪ್ರೇಮ ಪ್ರಕರಣವೂ ಮುರಿದು ಬಿದ್ದಿದೆ. ಶಾಹಿದ್ ತನ್ನ ಆತ್ಮೀಯ ಗೆಳೆಯರಲ್ಲಿ ಹೇಳಿಕೊಳ್ಳುವಂತೆ, ಪ್ರಿಯಾಂಕ ತುಂಬ ಹಾಟ್ ಎಂದು ಆಕೆಯ ಬಗ್ಗೆ ಹೊಗಳುತ್ತಾನಂತೆ ಶಾಹಿದ್.