Article Bollywood Gossips %e0%b2%b6%e0%b2%be%e0%b2%b9%e0%b2%bf%e0%b2%a6%e0%b3%8d %e0%b2%aa%e0%b3%8d%e0%b2%b0%e0%b2%bf%e0%b2%af%e0%b2%be%e0%b2%82%e0%b2%95%e0%b2%be %e0%b2%87%e0%b2%82%e0%b2%9f%e0%b2%b0%e0%b3%8d%e2%80%8c%e0%b2%a8%e0%b3%86%e0%b2%9f%e0%b3%8d %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf 109021100069_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾಹಿದ್-ಪ್ರಿಯಾಂಕಾ ಇಂಟರ್‌ನೆಟ್ ಪ್ರೀತಿ..!

ಶಾಹಿದ್ ಕಪೂರ್
ಇದು ಇಬ್ಬರು ಕಳಕೊಂಡವರ ಕಥೆ. ಆಕೆಗೆ ಪ್ರಿಯಕರ ಕೈಕೊಟ್ಟು ಮತ್ತೊಬ್ಬಾಕೆಗೆ ಮಲ್ಲೆ ಮುಡಿಸುತ್ತಿದ್ದರೆ, ಈತನ ಪ್ರಿಯತಮೆ ಇನ್ನೊಬ್ಬನ ತೆಕ್ಕೆ ಸೇರಿ ಸುಮ್ಮನಿದ್ದಾಳೆ. ಇಬ್ಬರೂ ಸಮಾನ ದುಃಖಿಗಳು. ಯಾರನ್ನೂ ನಂಬಬಾರದು ಎಂಬ ಸ್ಥಿತಿಯಲ್ಲಿರುವಾಗ ಕೊಚ್ಚಿ ಹೋಗುವವರಿಗೆ ಹುಲ್ಲು ಕಡ್ಡಿ ಕೈಗೆ ಸಿಕ್ಕಂತೆ ಇಬ್ಬರೂ ನೇತಾಡುತ್ತಿದ್ದಾರೆ. ಇನ್ನೂ ದಡ ಸೇರಿಲ್ಲ. ಅಷ್ಟರಲ್ಲೇ ಸುದ್ದಿಯಾಗಿದೆ..!

ಪ್ರಿಯಾಂಕಾ ಛೋಪ್ರಾಳಿಗೆ ಆಕೆಯ ಪ್ರಿಯಕರ ಹರ್ಮಾನ್ ಬಾವೇಜಾ ಸೋಡಾ ಚೀಟಿ ಕೊಟ್ಟಿದ್ದರೆ, ಇತ್ತ ಶಾಹಿದ್ ಕಪೂರ್‌ಗೆ ಕಿಕ್ ಹೊಡೆದು ಕರೀನಾ ಕಪೂರ್ ಸೈಫ್ ತೆಕ್ಕೆಗೆ ಜಾರಿದ್ದಾಳೆ. ಹಾಗಿರುವಾಗ ಹೊಸತರ ಹುಡುಕಾಟ ಸಾಮಾನ್ಯ. ಅದಕ್ಕೆ ವೇದಿಕೆಯಾದದ್ದು ಸಾಮಾಜಿಕ ಸಂಪರ್ಕ ತಾಣ 'ಫೇಸ್‌ಬುಕ್'. ಇದಿಷ್ಟು ನೇರವಾಗಿ ಹೇಳಬಹುದಾದ ವಿಚಾರ.

ಈ ತಾಣದಲ್ಲಿ ಪ್ರಿಯಾಂಕಾ ಛೋಪ್ರಾ-ಶಾಹಿದ್ ಕಪೂರ್ ಇಬ್ಬರೂ ಗಂಟೆಗಟ್ಟಲೆ ಮಧ್ಯರಾತ್ರಿವರೆಗೂ ಚಾಟ್ ಮಾಡುತ್ತಿದ್ದಾರಂತೆ. ಪ್ರಿಯಾಂಕಾ ತನ್ನ 'ವಾಟ್ಸ್ ಯುವರ್ ರಾಶಿ?' ಚಿತ್ರದ ಶೂಟಿಂಗ್‌ಗೆಂದು ಚಿಕಾಗೋದಲ್ಲಿದ್ದರೆ, ಶಾಹಿದ್ ಮತ್ತೊಂದು ಚಿತ್ರದಲ್ಲಿ ಜೋಧಪುರದಲ್ಲಿದ್ದಾನಂತೆ- ಇದು ಬಲ್ಲ ಮ‌ೂಲಗಳ ವರದಿ.

ಇವರಿಬ್ಬರೂ ಅಷ್ಟೊಂದು ಹತ್ತಿರವಾಗಲು ಕಾರಣವೇನೆಂದು ಹುಡುಕಲು ಹೋದಾಗ ಅಲ್ಲಿ 'ಕಾಮಿನಿ' ಎಂಬ ಚಿತ್ರದ ವಿಚಾರ ಬರುತ್ತದೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ಚಿತ್ರದಲ್ಲಿ ಶಾಹಿದ್ ನಾಯಕ, ಪ್ರಿಯಾಂಕಾ ನಾಯಕಿ. ಕಿಸ್, ಮಿಸ್‌ಗಳೇ ಚಿತ್ರದಲ್ಲಿ ತುಂಬಿದೆ ಎನ್ನುವುದು ಹತ್ತಿರದವರ ಮಾತು. ಶೂಟಿಂಗ್ ಮುಗಿಸಿದ ನಂತರ ಕಂಪ್ಯೂಟರ್ ಮುಂದೆ ಕೂರುತ್ತಿದ್ದ ಇವರೀಗ ಎಷ್ಟು ದೂರವಿದ್ದರೂ ಹತ್ತಿರ... ಹತ್ತಿರವಂತೆ..!

ಪ್ರಿಯಾಂಕಾ ಬುದ್ಧಿವಂತೆ. ತನ್ನ ಹೆಸರನ್ನು ಬಹಿರಂಗಗೊಳಿಸದೆ 'ಸರ್ ಪ್ರಾಂಕ್ಸ್ ಎ ಲಾಟ್' ಎಂಬ ನಾಮಧೇಯದಲ್ಲಿ ಶಾಹಿದ್ ಜತೆ ಚಾಟ್ ಮಾಡುತ್ತಾಳಂತೆ. ಆತನನ್ನು ಗೆಳೆಯರು 'ಶಾ-ಶಾ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರೆ ಆಕೆ ಪ್ರೀತಿಯಿಂದ 'ಶೇಕ್ಸ್' ಎಂದೇ ಕರೆಯುತ್ತಾಳೆ. ಆತ ಕೂಡ ಸುಮ್ಮನಿಲ್ಲ. ಮುದ್ದಿನಿಂದ 'ಪೀಫೀ' ಎಂದು ಕರೆಯುತ್ತಿದ್ದಾನಂತೆ..!

ಇಬ್ಬರೂ ದೂರದೂರಿನಲ್ಲಿರುವುದರಿಂದ ಫೋನ್ ಮತ್ತು ಇಂಟರ್‌ನೆಟ್‌ನಲ್ಲಿ ಸಂಪರ್ಕಿಸುತ್ತಿದ್ದಾರೆ. ಹತ್ತಿರವಿದ್ದರೆ ಅದರ ಅಗತ್ಯವಿರುವುದಿಲ್ಲ. ಯಾಕೆಂದರೆ ಇವರಿಬ್ಬರೂ ಮುಂಬೈ ಕಡಲತಡಿಯ ವರ್ಸೋವಾ ಬಳಿಯ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.

ಕನ್‌ಫ್ಯೂಸ್ ಮಾಡ್ಕೋಬೇಡಿ - ಅವರು ಒಂದೇ ಕೊಠಡಿಯಲ್ಲಿ ವಾಸಿಸುತ್ತಿಲ್ಲ..!
IFM

Share this Story:

Follow Webdunia kannada