Select Your Language

Notifications

webdunia
webdunia
webdunia
webdunia

ಶಾಹಿದ್ ಚಿತ್ರಕ್ಕಾಗಿ ಸಂಪೂರ್ಣ ನಗ್ನನಾದ ರಾಜ್‌ಕುಮಾರ್

ಶಾಹಿದ್
, ಸೋಮವಾರ, 31 ಮಾರ್ಚ್ 2014 (17:32 IST)
PR
PR
ಶಾಹಿದ್ ಚಿತ್ರಕ್ಕಾಗಿ ನಾನು ಸಂಪೂರ್ಣ ನಗ್ನನಾಗಿದ್ದೇನೆ ಎಂದು ಹೇಳಿಕೊಂಡವರು ರಾಜ್‌ಕುಮಾರ್ ಯಾದವ್. ನನಗಾಗ ಯಾವುದೇ ಹಿಂಜರಿಕೆ ಆಗಲಿಲ್ಲ. ಆ ದೃಶ್ಯಕ್ಕೆ ಅದರ ಅಗತ್ಯವಿತ್ತು. ಶಾಹಿದ್ ಅವರನ್ನು ಕೆಲವರು ನಡು ರಸ್ತೆಯ ಮೇಲೆ ನಿಲ್ಲಿಸಿ ನಗ್ನರಾಗಿಸಿ ಥಳಿಸುತ್ತಾರೆ. ಆ ದೃಶ್ಯಕ್ಕೆ ನಗ್ನತೆಯ ಅವಶ್ಯಕತೆ ಇತ್ತು. ಹಾಗಾಗಿ ಸಂಪೂರ್ಣ ನಗ್ನನಾಗಿದ್ದೇನೆ ಎಂದು ರಾಜ್‌ಕುಮಾರ್ ಹೇಳಿದ್ದಾರೆ.

ಗ್ಯಾಂಗ್ಸ್ ಆಫ್ ವಾಸೆಪುರ್ ಚಿತ್ರದ ಈ ನಟ ಶಾಹಿದ್ ಅಜ್ಮಿ ಜೀವನ ಆಧಾರಿತ ಶಾಹಿದ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾನವ ಹಕ್ಕು ಕಾರ್ಯಕರ್ತ ಶಾಹಿದ್ ಅಜ್ಮಿ ಅವರ ಪಾತ್ರ ಅದಾಗಿದ್ದು ಅವರು 2010ರಲ್ಲಿ ಕೊಲೆಯಾಗಿದ್ದರು. ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರಿಗೆ ಈ ದೃಶ್ಯದಲ್ಲಿ ಸಂಪೂರ್ಣ ನಗ್ನನಾಗಿ ನಟಿಸುವುದಾಗಿ ಹೇಳಿದ್ದು ನಾನೇ. ಸ್ಕ್ರಿಪ್ಟ್‌ಗೆ ಅಗತ್ಯವಿದ್ದಲ್ಲಿ ನನಗೆ ಮನವರಿಕೆಯಾದಲ್ಲಿ ಯಾವುದೇ ಷರತ್ತಿಲ್ಲದೆ ಎಂಥ ದೃಶ್ಯದಲ್ಲಾದರೂ ನಾನು ನಟಿಸುತ್ತೇನೆ. ಇದು ಚಿತ್ರಕ್ಕೆ ಅಗತ್ಯವಾಗಿದ್ದು ಎಂದವರು ಸಮರ್ಥಿಸಿಕೊಂಡಿದ್ದಾರೆ.

ಕಮರ್ಷಿಯಲ್ ಚಿತ್ರಗಳೆಂದು ಆದ್ಯತೆಗಳನ್ನು ನೀಡುತ್ತಿಲ್ಲ. ಜನರು ಬಹುಕಾಲ ನೆನಪಿನಲ್ಲಿ ಉಳಿಯುವಂತ ಚಿತ್ರ ಮಾಡಬೇಕೆಂಬ ಆಸೆ ಇದೆ. ಲವ್ ಸೆಕ್ಸ್ ಧೋಕಾ, ಕೈ ಪೋ ಚೆ, ಮೊದಲಾದ ಚಿತ್ರಗಳು ನನಗೆ ತೃಪ್ತಿ ನೀಡಿವೆ ಎಂದೂ ಅವರು ಹೇಳಿದ್ದಾರೆ.

Share this Story:

Follow Webdunia kannada