Article Bollywood Gossips %e0%b2%b6%e0%b2%be%e0%b2%b9%e0%b2%b0%e0%b3%81%e0%b2%96%e0%b3%8d%e2%80%8c%e0%b2%97%e0%b3%86 %e0%b2%aa%e0%b2%be%e0%b2%a4%e0%b3%8d%e0%b2%b0 %e0%b2%92%e0%b2%aa%e0%b3%8d%e0%b2%aa%e0%b3%81%e0%b2%b5%e0%b3%81%e0%b2%a6%e0%b2%bf%e0%b2%b2%e0%b3%8d%e0%b2%b2 %e0%b2%85%e0%b2%9c%e0%b3%80%e0%b2%9c%e0%b3%8d 107121800022_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾಹರುಖ್‌ಗೆ ಪಾತ್ರ ಒಪ್ಪುವುದಿಲ್ಲ: ಅಜೀಜ್

ಅಜೀಜ್ ಮಿರ್ಜಾ
IFM
ಅಜೀಜ್ ಮಿರ್ಜಾ ತಮ್ಮ ಚಲ್ತೆ ಚಲ್ತೆ ನಿರ್ದೇಶಿಸಿದ ನಂತರ ಕಾವೇರಿ, ಗೋದಾವರಿಯಲ್ಲಿ ಸಾಕಷ್ಟು ನೀರು ಹರಿದಿದೆ. ಆದರೂ ಅಜೀಜ್ ಬದುಕು ಬದಲಾಗಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಮೃದು ಮನಸ್ಸಿನ ಮಿತಭಾಷಿ ಅಜೀಜ್. ನನ್ನ ಹೊಸ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಂಬೈನಿಂದ ಹೊರಗೆ ವಿದೇಶದಲ್ಲಿ ಸಾಗಿದೆ. ಜಾಗತೀಕರಣ ಚಿತ್ರರಂಗವನ್ನು ಬದಲಾವಣೆಯ ಗಾಳಿಗೆ ಒಡ್ಡಿದೆ. ಈ ಜಾಗತೀಕರಣ ನನ್ನ ವೃತ್ತಿಯ ಆಯಾಮದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವುದನ್ನು ನೋಡಬೇಕಾಗಿದೆ.

ತಮ್ಮ ಶಿಷ್ಯ ಶಾಹರುಖ್ ಖಾನ್ ಅವರೊಂದಿಗೆ ಸಂಬಂಧಗಳು ಹಳಸಿವೆ ಎನ್ನುವ ವದಂತಿಯನ್ನು ತಳ್ಳಿಹಾಕಿದ ಅಜೀಜ್ ಅದು ಹೇಗೆ ಸಾಧ್ಯ. ಜೂಹಿ ಚಾವ್ಲಾ ಮತ್ತು ಶಾಹರುಖ್ ನನ್ನ ಮಕ್ಕಳ ಸಮ ಅವರೊಂದಿಗೆ ವಿರಸ ಸಾಧ್ಯವೇ ಇಲ್ಲ. ಶಾಹರುಖ್ ಖಾನ್ ಈ ಮಟ್ಟಕ್ಕೆ ಏರಲು ನಾನು ಕಾರಣ ಎಂದು ಕೆಲವರು ಹೇಳುತ್ತಾರೆ. ಅದು ಹಾಗೇ ಇಲ್ಲವೇ ಇಲ್ಲ. ಸಾಧನೆಯ ಹಾದಿಯಲ್ಲಿ ಅವರವರು ಸಾಗಿದ ನಂತರ ದೊರೆಯುವ ಫಲಗಳು. ಅವುಗಳಿಗೆ ಯಾರದೇ ಸಹಾಯ ಬೇಕಿಲ್ಲ. ನನ್ನದೂ ಕೂಡ. ಎಂದು ಮಾತಿಗೆ ಕೆಲಕಾಲ ವಿರಾಮ ನೀಡುತ್ತಾರೆ.

ನನ್ನ ಹೊಸ ಚಿತ್ರದ ನಾಯಕನಾಗುವವ ಇನ್ನೂ ಯುವಕನಾಗಿರಬೇಕು. ಆಗ ತಾನೆ ಕಾಲೇಜು ಜೀವನದಿಂದ ಹೊರಬಂದವನಿರಬೇಕು. ಶಾಹರುಖ್ ಖಾನ್‌ಗೆ ಆ ಪಾತ್ರ ಹೊಂದುವುದಿಲ್ಲ ಆದ್ದರಿಂದ ಶಾಹರುಖ್ ಸ್ಥಾನಕ್ಕೆ ಶಾಹಿದ್ ಕಪೂರ್ ಬರಬೇಕಾಯಿತು. ಕೆಲ ಸಂಬಂಧಗಳು ನಮ್ಮ ಗಡಿಯಾಚೆ ನಿಲ್ಲುತ್ತವೆ ನನ್ನ ಶಾಹರುಖ್ ಮತ್ತು ಜೂಹಿ ನಡುವಿನ ಸಂಬಂಧ ಇದಕ್ಕೆ ಉತ್ತಮ ಉದಾಹರಣೆಯಾಗಬಲ್ಲದು ಎಂದು ಅಜೀಜ್ ವಿಶ್ರಾಂತಿಯತ್ತ ತೆರಳಿದರು.

Share this Story:

Follow Webdunia kannada