Article Bollywood Gossips %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%ae%e0%b3%82%e0%b2%b0%e0%b2%a8%e0%b3%87 %e0%b2%ae%e0%b2%97%e0%b3%81%e0%b2%b5%e0%b2%bf%e0%b2%97%e0%b3%82 %e0%b2%aa%e0%b2%be%e0%b2%b8%e0%b3%8d%e0%b2%aa%e0%b3%8b%e0%b2%b0%e0%b3%8d%e0%b2%9f%e0%b3%8d %e0%b2%b0%e0%b3%86%e0%b2%a1%e0%b2%bf 113083000032_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾರೂಖ್ ಮೂರನೇ ಮಗುವಿಗೂ ಪಾಸ್ಪೋರ್ಟ್ ರೆಡಿ

ಶಾರೂಖ್ ಖಾನ್
PR
ಶಾರೂಖ್ ಖಾನ್ಗೆ ಮೂರನೇ ಮಗುವಾದ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಅವಧಿಪೂರ್ವವಾಗಿ ಜನಿಸಿದರೂ ಆಸ್ಪತ್ರೆ ಮಂದಿಯ ಅಕ್ಕರೆ ನಾಜೂಕಿನಲ್ಲಿ ಮಗು ಆರೋಗ್ಯವಾಗಿ ಬೆಳೆಯುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಶಾರೂಖ್ಖಾನ್ ವಿಶೇಷ ಧನ್ಯವಾದ ತಿಳಿಸಿದ್ದೂ ಆಯಿತು. ಈ ಮೂಲಕ ಶಾರೂಖ್ ಗೌರಿ ದಂಪತಿಗಳು ಎರಡು ಗಂಡು ಹಾಗೂ ಒಂದು ಹೆಣ್ಣುಮಗುವಿನ ತಾಯಿಯಾದಂತಾಗಿದೆ. ಇತ್ತೀಚೆಗೆ ಗೌರಿ ಶಾರೂಖ್ಖಾನ್ ಪಾಸ್ಪೋರ್ಟ್ ಆಫೀಸಿನಲ್ಲಿ ಕಾಣಿಸಿಕೊಂಡರು. ತಮ್ಮ ಮೂರನೇ ಮಗು ಅಬ್ರಾಹಂಗೆ ಪಾಸ್ಪೋರ್ಟ್ ಮಾಡಿಸುವ ಸಲುವಾಗಿ ಹಾಗೂ ತಮ್ಮ ಪಾಸ್ಪೋರ್ಟ್ ರಿನ್ಯೂವಲ್ಗಾಗಿ ಗೌರಿ ವರ್ಲ್ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ಭೇಟಿ ನೀಡಿದ್ದರು.

ಕಳೆದ ಮೇ ತಿಂಗಳಿನಲ್ಲಿ ಜನಿಸಿದ ಅಬ್ರಾಹಂನನ್ನು ವಿದೇಶಕ್ಕೆ ಯಾವುದೇ ಸಮಯದಲ್ಲಿ ಒಯ್ಯಬೇಕಾಗಬಹುದು ಎಂಬ ಕಾರಣಕ್ಕೆ ಗೌರಿ ಖಾನ್ ಈಗಾಗಲೇ ತಯಾರಿ ನಡೆಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಸೆಲೆಬ್ರೆಟಿಯ ಪತ್ನಿಯೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಕೇಳಬೇಕೇ?ಅವರು ಪಾಸ್ಪೋರ್ಟ್ ಕಚೇರಿಗೆ ಭೇಟಿ ನೀಡಿದಾಗ ಅವರನ್ನು ನೋಡಲೆಂದೇ ಅಲ್ಲಿ ಸಾಕಷ್ಟು ಮಂದಿ ಜಮಾಯಿಸಿದ್ದರಂತೆ. ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಪೇಪರ್ ವರ್ಕ್ ಮಾಡಿದ ಗೌರಿ ಕೆಲಸ ಮುಗಿದ ಮೇಲೆ ಜನಸಂದಣಿಯಿಂದ ಹೊರಬರಲು ಪ್ರಯಾಸ ಪಡಬೇಕಾಯಿತಂತೆ.

Share this Story:

Follow Webdunia kannada