ಶಾರೂಖ್ ಪಾರ್ಟಿಗೆ ಪ್ರಿಯಾಂಕಾ ಚೋಪ್ರಾ ಗೈರು
Publish Date: Wed, 14 Aug 2013 (10:43 IST)
Updated Date: Wed, 14 Aug 2013 (10:43 IST)
ಕಿಂಗ್ ಖಾನ್ ಶಾರೂಖ್ ರಂಜಾನ್ ಪ್ರಯುಕ್ತ ಶನಿವಾರ ಈದ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಬಿಗ್ಬಿ, ಹೃತಿಕ್ ರೋಷನ್ ಮೊದಲಾದ ಗಣ್ಯರು ಆಗಮಿಸಿದ್ದರು. ಆದರೆ ಒಂದು ಕಾಲದಲ್ಲಿ ಆಪ್ತ ಸ್ನೇಹಿತೆಯಾಗಿದ್ದ ಜೂಹಿ ಚಾವ್ಲಾ, ಪ್ರಿಯಾಂಕಾ ಚೋಪ್ರಾ, ಕಾಜೋಲ್, ಅರ್ಜುನ್ ರಾಂಪಾಲ್ ಅವರು ಪಾರ್ಟಿಗೆ ಬಂದಿರಲಿಲ್ಲ. ಅದರಲ್ಲೂ ಶಾರೂಖ್ ಆಪ್ತಮಿತ್ರರು ಎನ್ನಲಾದ ಪ್ರಿಯಾಂಕಾ ಹಾಗೂ ಅರ್ಜುನ್ ರಾಂಪಾಲ್ ಗೈರು ಹಾಜರಿ ಎದ್ದು ಕಾಣುತ್ತಿತ್ತು.ಶಾರೂಖ್ ಪ್ರತಿ ವರ್ಷ ತಮ್ಮ ನಿವಾಸ ಮನ್ನತ್ನಲ್ಲಿ ಪ್ರೀತಿಪಾತ್ರರಾದವರೊಂದಿಗೆ ಪಾಟರ್ಿ ಆಚರಿಸುತ್ತಾರೆ. ಆದರೆ ಈ ಬಾರಿ ಆತ್ಮೀಯ ಬಳಗದವರ ಗೈರು ಆಶ್ಚರ್ಯ ಹುಟ್ಟಿಸಿತು. ಅಜಯ್ ದೇವಗನ್ ಕಾಜೋಲ್ ದಂಪತಿಗಳಿಗೆ ಆಹ್ವಾನವಿದ್ದರೂ ಅವರು ಬಂದಿರಲಿಲ್ಲ. ಅರ್ಬಾಜ್ ಖಾನ್, ಪತ್ನಿ ಮಲೈಕಾ, ಸಲ್ಮಾನ್ ಖಾನ್ ಸಹೋದರ ಮತ್ತು ನಾದಿನಿ, ಜೂಹಿ ಪತಿ ಜೈ ಮೆಹ್ತಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಶಾರೂಖ್ ಖಾನ್ ಚಿತ್ರೋದ್ಯಮದ ಎಲ್ಲ ಗಣ್ಯರಿಗೆ ಖುದ್ದು ಆಹ್ವಾನ ನೀಡಿ ಬರಹೇಳಿದ್ದು ವಿಶೇಷವಾಗಿತ್ತು.