ಶಾರೂಖ್ ಖಾನ್ ಹೊಸ ಮಗನ ಚಿತ್ರ !
Publish Date: Sat, 19 Oct 2013 (14:59 IST)
Updated Date: Sat, 19 Oct 2013 (14:59 IST)
ಬಾಡಿಗೆ ತಾಯಿಯಿಂದ ಶಾರೂಖ್ ಮಗುವನ್ನು ಪಡೆದದ್ದು ತುಂಬಾ ದೊಡ್ಡ ಸುದ್ದಿ ಆಗಿತ್ತು. ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಶಾರೂಖ್ ಅದ್ಯಾಕೋ ಈ ಮಗುವಿಗೆ ಸಂಬಂಧಪಟ್ಟಂತೆ ಸದಾ ವಿವಾದಗಳಲ್ಲಿ ತೇಲುವ೦ತಾಯಿತು. ತನಗೆ ಗಂಡು ಮಗುವೆ ಬೇಕೆಂದು ಹೇಳಿದ್ದು ಸಹ ವಿವಾದಕ್ಕೆ ಎಡೆ ಮಾಡಿದ್ದು ಹಳೆಯ ಕಥೆ. ಈಗ ಮಗುವಿನ ಬಗ್ಗೆ ಮತ್ತೊಂದು ಸುದ್ದಿ ಇದೆ. ತನ್ನ ಹೊಸ ಕಂದನಿಗೆ ಶಾರೂಖ್ ಎಬಿ ರಾಮ್ ಅಂತ ಹೆಸರು ಇಟ್ಟಿದ್ದಾರೆ. ಆ ಮಗುವನ್ನು ತುಂಬಾ ಜಾಕರೂಕತೆಯಿಂದ ಕಾಪಾಡುತ್ತಿರುವ ಗೌರಿ ಖಾನ್ ಈಗ ಅವನ ವಿಷಯದಲ್ಲಿ ತುಂಬಾ ಬ್ಯುಸಿ. ಯಾರನ್ನು ಹೋಲುತ್ತದೆ ಇದು ಎನ್ನುವುದು ಸದ್ಯಕ್ಕೆ ಮೀಡಿಯಾ ಮಂದಿಗೆ ಗೊತ್ತಾಗಿಲ್ಲ! ವಿಷಯ ಏನೇ ಇರಲಿ ಶಾರೂಖ್ ಖಾನ್ ಹೊಸ ವಾರಸುದಾರ ರಾಮ್ ನನ್ನು ನೋಡಲು ಆತನ ಅಭಿಮಾನಿಗಳಿಗೆ ತುಂಬಾ ಕಾತುರ -ಆತುರ . ಇತ್ತೀಚೆಗೆ ಶಾರುಖ್ ಖಾನ್ ಮನೆಯ ಒಂದು ಫೋಟೋ ಹೊರ ಬಂದಿದೆ. ಆ ಚಿತ್ರದಲ್ಲಿ ಎಳೇ ಮಗುವಿಗೆ ಹಾಲು ಕುಡಿಸುತ್ತಿರುವುದು ಕಂಡು ಬರುತ್ತಿದೆ.ಇದು ಈಗ ಎಲ್ಲರ ಆಸಕ್ತಿಯ ಕೇಂದ್ರ ಬಿಂದು . ಇದು ಶಾರೂಖ್ ಖಾನ್ ಮಗ ಎಬಿ ರಾಮ್ ದೇ ಅಂತ ಬಿ ಟೌನ್ ಮಂದಿ ಹೇಳುತ್ತಿದ್ದಾರೆ. ಏನೇ ಹೇಳಿ ರಾಜನ ಮಗ ಅತ್ತರು ಸುದ್ದಿ ನಕ್ಕರೂ ಸುದ್ದಿ ಹಾಲು ಕುಡಿದರೂ... !