Article Bollywood Gossips %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%96%e0%b2%be%e0%b2%a8%e0%b3%8d %e0%b2%ae%e0%b3%87%e0%b2%b2%e0%b3%86 %e0%b2%b5%e0%b2%b0%e0%b3%8d%e0%b2%a3 %e0%b2%ad%e0%b3%87%e0%b2%a6%e0%b2%a6 %e0%b2%a6%e0%b3%82%e0%b2%b0%e0%b3%81 %e0%b2%a6%e0%b2%be%e0%b2%96%e0%b2%b2%e0%b3%81 113082400005_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾರೂಖ್ ಖಾನ್ ಮೇಲೆ ವರ್ಣ ಭೇದದ ದೂರು ದಾಖಲು

ಶಾರೂಖ್ ಖಾನ್
PR
ಕಿಂಗ್ ಖಾನ್ ಶಾರೂಖ್ ವರ್ಣ ಭೇದ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುವಂತಾಗಿದೆ. ನಿಮ್ಮ ತ್ವಚೆಗೆ ಗೌರವರ್ಣ ಬೇಕೆ? ಈ ಕ್ರೀಮ್ ಹಚ್ಚಿಕೊಳ್ಳಿ ಎಂದು ಪುರುಷರ ಕ್ರೀಂ ಒಂದನ್ನು ಜಾಹೀರಾತು ನೀಡುವ ಶಾರೂಖ್ ಮೇಲೆ ಆನ್ಲೈನ್ ಪಿಟೀಷನ್ಗೆ ಚಾಲನೆ ನೀಡಲಾಗಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಜಾಹೀರಾತು ಗೌರವರ್ಣದ ಬಗ್ಗೆ ಅವರು ಕೊಡುವ ಸಲಹೆ ಈಗ ಶ್ವೇತ ವರ್ಣ ಹಾಗೂ ಕೃಷ್ಣ ವರ್ಣಿಯರ ನಡುವಿನ ಕಂದಕ ಹೆಚ್ಚಿಸಿದೆ ಎನ್ನಲಾಗಿದೆ.

ಡಾರ್ಕ್ ಈಸ್ ಬ್ಯೂಟಿಫುಲ್ ಎಂದು ಹೇಳಿ ಶಾರೂಖ್ ಖಾನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇಮಾಮಿ ಸಮೂಹದ ಉತ್ಪನ್ನ ಫೇರ್ ಆಂಡ್ ಹ್ಯಾಂಡ್ಸಮ್ ಪರವಾಗಿ ಪ್ರಚಾರ ಮಾಡುತ್ತಾ ಅವರು ಕಪ್ಪುವರ್ಣಕ್ಕಿಂತ ಶ್ವೇತವರ್ಣ ಶ್ರೇಷ್ಠ, ಅದಕ್ಕಾಗಿ ನೀವು ಈ ಕ್ರೀಂ ಬಳಸಿ, ಮುಜುಗರ ಅನುಭವಿಸಬೇಡಿ ಎನ್ನುತ್ತಾರೆ ಶಾರೂಖ್. ಅವರ ಪ್ರಚಾರ ಹೇಳಿಕೆ ಖಂಡಿಸಿ ಚೇಂಜ್.ಆರ್ಗ್ ವೆಬ್ಸೈಟಿನಲ್ಲಿ ಹಾಕಿರುವ ಪಿಟಿಷನ್ಗೆ ಈಗಾಗಲೇ 13,000ಕ್ಕೂ ಅಧಿಕ ಮಂದಿಯ ಸಹಿ ಬಿದ್ದಿದೆ. ಬಿಳಿ ಬಣ್ಣವಿದ್ದರೆ ಮಾತ್ರ ನಿಮಗೆ ಬದುಕಿನಲ್ಲಿ ಯಶಸ್ಸು ಸಿಗುತ್ತದೆ ಎಂದು ಪ್ರಚಾರ ಮಾಡುವುದು ಎಷ್ಟು ಸರಿ? ಇದು ವರ್ಣ ಬೇಧ ನೀತಿಯಲ್ಲದೆ ಮತ್ತೇನು? ಜಾಹಿರಾತಿನಲ್ಲಿ ಜ್ಯಾದಾ ಎಂಬ ಪದ ಬಳಕೆ ಆಕ್ಷೇಪಾರ್ಹ ಎಂದು ದೂರುದಾರರು ತಿಳಿಸಿದ್ದಾರೆ.

ಬಾಲಿವುಡ್ ನಟಿ ನಂದಿತಾ ದಾಸ್ ಅವರು ಕೂಡಾ ಈ ದೂರಿಗೆ ಸಹಿ ಮಾಡುವ ಮೂಲಕ ಜಾಹೀರಾತು ತಪ್ಪು ಸಂದೇಶ ರವಾನಿಸುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಒಂದಷ್ಟು ಸಹಿ ಸಂಗ್ರಹವಾದ ಬಳಿಕ ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರಿಗೆ ದೂರು ಸಲ್ಲಿಸುವ ಆಲೋಚನೆ ಇದೆ ಎನ್ನಲಾಗಿದೆ.

Share this Story:

Follow Webdunia kannada