Article Bollywood Gossips %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%96%e0%b2%be%e0%b2%a8%e0%b3%8d %e0%b2%95%e0%b3%81%e0%b2%a1%e0%b3%8d%e0%b2%b2%e0%b2%a6 %e0%b2%b9%e0%b3%81%e0%b2%a1%e0%b3%81%e0%b2%97%e0%b2%a8%e0%b2%82%e0%b2%a4%e0%b3%86 %e0%b2%b9%e0%b3%8c%e0%b2%a6%e0%b2%be 113080700006_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾರೂಖ್ ಖಾನ್ ಕುಡ್ಲದ ಹುಡುಗನಂತೆ ಹೌದಾ?

ಶಾರೂಖ್ ಖಾನ್
PR
ವಿಕೀಪೀಡಿಯಾ ಇರಲಿ, ಅಥವಾ ಇನ್ನಾವುದೇ ವೆಬ್ಸೈಟ್ ಇರಲಿ, ಶಾರೂಖ್ ಜನ್ಮರಹಸ್ಯ ಹುಡುಕುತ್ತಾ ಹೋದರೆ ಅದು ದೆಹಲಿಯ ತಲವಾರ್ ನರ್ಸಿಂಗ್ ಹೋಂನಿಂದ ಆರಂಭವಾಗುತ್ತದೆ. ಆದರೆ ಶಾರೂಖ್ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಜನ್ಮರಹಸ್ಯ ಬಹಿರಂಗಗೊಳಿಸಿದ್ದು ನಾನು ಹುಟ್ಟಿದ್ದು ದೆಹಲಿಯಲ್ಲಲ್ಲ, ಕರ್ನಾಟಕದ ಬಂದರು ನಗರಿ ಮಂಗಳೂರಿನಲ್ಲಿ ಎಂಬ ಸ್ಫೋಟಕ ಮಾಹಿತಿ ಹೊರಗೆಡಹಿದ್ದಾರೆ. ಇದನ್ನು ಕೇಳಿದ ಬಳಿಕ ವಿಕೀಪೀಡಿಯಾ ಕೂಡಾ ಈ ದೆಹಲಿ ಎಂದಿದ್ದ ಹುಟ್ಟೂರನ್ನು ಮಂಗಳೂರು ಎಂದು ಬದಲಾಯಿಸಿದೆ.

ಸುದ್ದಿ ಹರಡುತ್ತಿದ್ದಂತೆ ಕರಾವಳಿ ಭಾಗದ ಶಾರೂಖ್ ಅಭಿಮಾನಿಗಳು ಈತ ನಮ್ಮ ಕುಡ್ಲದ ಹುಡುಗ ಎಂದು ಸಂಭ್ರಮಿಸಿದ್ದಾರೆ. ಫೇಸ್ಬುಕ್, ಟ್ವಿಟ್ಟರ್ನಲ್ಲೂ ಸದ್ಯ ಇದೇ ಸುದ್ದಿ ಹರಿದಾಡುತ್ತಿದೆ. ಶಾರೂಖ್ ಮಂಗಳೂರಿನಲ್ಲಿ ಹುಟ್ಟಲು ಹೇಗೆ ಸಾಧ್ಯ, ಅದು ಬೆಂಗಳೂರು ಇರಬಹುದು ಎಂದು ಗಾರ್ಡನ್ ಸಿಟಿ ಅಭಿಮಾನಿಗಳು ವಾದಿಸುತ್ತಿದ್ದಾರೆ. ಶಾರೂಖ್ ತಾಯಿ ಹೈದರಾಬಾದ್ ಮೂಲದವರಾಗಿದ್ದು ಕೆಲಕಾಲ ಬೆಂಗಳೂರಿನಲ್ಲಿದ್ದರು. ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು. ನನ್ನ ತಾಯಿ ಮನೆಯವರಲ್ಲಿ ಅಜ್ಜ ಮಾತ್ರ ಉಳಿದಿದ್ದರು. ನನ್ನ ತಾಯಿ ಹಾಗೂ ಅತ್ತೆಯರು ಮಂಗಳೂರಿನಲ್ಲಿ ನೆಲೆಸಿದ್ದಾಗ ನಾನು ಕುಟುಂಬದ ಮೊದಲ ಮಗುವಾಗಿ ಜನಿಸಿದೆ. ಐದು ವರ್ಷದ ತನಕ ನನ್ನನ್ನು ಮಂಗಳೂರಿನಲ್ಲಿ ಅಜ್ಜಿ ಅತ್ತೆಯರು ಬೆಳೆಸಿದರು. ಕನ್ನಡ ಬಲ್ಲ ಮನೆಕೆಲಸದವರೇ ನನ್ನ ಆಟಪಾಠದ ಸಾಥಿಗಳಾಗಿದ್ದರು ಎಂದಿದ್ದಾರೆ. ಅವರ ಈ ಮಾತುಗಳು ಶಾರೂಖ್ ಹುಟ್ಟಿದ ಸ್ಥಳದ ಬಗ್ಗೆ ಇದ್ದ ಕನ್ಫ್ಯೂಶನ್ಸ್ ಹೆಚ್ಚಿಸಿವೆ.

Share this Story:

Follow Webdunia kannada