ಶಾರೂಖ್ ಇನ್ನು ಮೂರು ಮಕ್ಕಳ ತಂದೆ!
Publish Date: Sat, 15 Jun 2013 (15:22 IST)
Updated Date: Sat, 15 Jun 2013 (15:21 IST)
ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಶಾರೂಖ್ ಬಾಲಿವುಡ್ನ ಬಹುಬೇಡಿಕೆಯ ನಟ. ಪ್ರಸ್ತುತ ಮೂರನೇ ಮಗುವಿನ ತಂದೆಯಾಗಲಿದ್ದಾರೆ ಎಂಬ ಸುದ್ದಿಯ ಮೂಲಕ ಅವರ ಮತ್ತೊಂದು ಸೀಕ್ರೇಟ್ ಬಯಲಾಗಿದೆ. ಶಾರೂಖ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳು. ಮೊದಲ ಪುತ್ರ ಆರ್ಯನ್ಗೆ 15 ವರ್ಷ, ಸುಹಾನಾಗೆ 13. ಮೂರನೇ ಮಗುವನ್ನು ಬಾಡಿಗೆ ತಾಯಿ ಮೂಲಕ ಪಡೆಯುವ ನಿರ್ಧಾರ ಮಾಡಿದ್ದಾರೆ ಈ ದಂಪತಿಗಳು.ಇಷ್ಟು ಕಾಲ ಗುಟ್ಟಾಗಿದ್ದ ಈ ವಿಷಯ ಬಾಲಿವುಡ್‌ನಲ್ಲೀಗ ಸುದ್ದಿಯಾಗಿದೆ. ಪತ್ನಿ ಗೌರಿಗೆ ಇನ್ನೊಂದು ಮಗು ಬೇಕು ಎಂದು ಎನಿಸಿತಂತೆ, ಆ ಕಾರಣಕ್ಕೆ ಬಾಡಿಗೆ ತಾಯಿಯ ಮೊರೆ ಹೋಗಿದ್ದೇವೆ ಎಂದಿದ್ದಾರೆ ಶಾರೂಖ್.
ಇದು ನನ್ನ ಆಸೆಯಲ್ಲ ನನ್ನ ಮಡದಿಯದ್ದೂ, ಹೀಗಿದ್ದೂ ಇಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಸುದ್ದಿಯನ್ನು ಶಾರೂಖ್ ಕೇವಲ ಆತ್ಮೀಯರೊಂದಿಗೆ ಮಾತ್ರ ಹಂಚಿಕೊಂಡಿದ್ದರಂತೆ. ಆದರೆ ಇದು ಮಾಧ್ಯಮದ ಮಂದಿಯ ಕಿವಿಗೂ ಬಿದ್ದಿದೆ. ಈಗಾಗಲೇ ಮಗುವಿನ ಲಿಂಗವೂ ನಿರ್ಧಾರವಾಗಿದ್ದು ಮೂಲಗಳ ಪ್ರಕಾರ ಅದು ಗಂಡು ಮಗು ಎನ್ನಲಾಗಿದೆ. ಅಮೀರ್ಖಾನ್ ಹಾಗೂ ಕಿರಣ್ ರಾವ್ ಭೇಟಿ ಮಾಡಿದ್ದ ವೈದ್ಯರನ್ನೇ ಶಾರೂಖ್ ದಂಪತಿಗಳೂ ಭೇಟಿ ಮಾಡಿದ್ದಾರಂತೆ. ಈ ಮೂಲಕ ಶಾರೂಖ್ ಮೂರನೇ ಮಗುವಿನ ಅಪ್ಪನಾಗುತ್ತಿದ್ದಾರೆ.