Publish Date: Fri, 22 Jun 2007 (12:49 IST)
Updated Date: Fri, 22 Jun 2007 (12:49 IST)
ವಿದೇಶಿ ಪುರಸ್ಕಾರಗಳು ಈಗ ಬಾಲಿವುಡ್ ತಾರೆಯರ ಕೈ ಅಳತೆಯಲ್ಲಿದೆ. ಶಬನಾ ಆಜ್ಮಿ, ಶಿಲ್ಪಾ ಶೆಟ್ಟಿಯ ಬಳಿಕ ಇದೀಗ ಶಾರೂಕ್ ಖಾನ್ ಈ ಸಾಲಿಗೆ ಸೇರಿದ್ದಾರೆ.
ಶಾರೂಕ್ ಅವರ ಜೀವನ ಸಾಧನೆ, ಭಾರತ- ಫ್ರೆಂಚ್ ಸರ್ಕಾರಗಳ ಮಧುರ ಬಾಂಧವ್ಯ, ಉಭಯ ರಾಷ್ಟ್ರಗಳ ಸಿನಿಮಾ ರಂಗಗಳ ಸಹಮಿಲನಕ್ಕೆ ಪ್ರಯತ್ನಿಸಿದ ಸಾಧನೆ ಗೌರವಿಸಿ ಪ್ರಸ್ತುತ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಫ್ರಾನ್ಸ್ ಸರ್ಕಾರ ಕೊಡಮಾಡುವ ಪ್ರಸ್ತುತ ಪುರಸ್ಕಾರ(ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಎಂಡ್ ಕಲ್ಚರ್) ಕ್ಕೆ ವಿಶೇಷ ಪ್ರಾಧಾನ್ಯವಿದೆ. ಬಾಲಿವುಡ್ ತಾರೆ ಶಬಾನಾಗೆ ಗೌರವ ಡಾಕ್ಟರೇಟ್, ಶಿಲ್ಪಾ ಶೆಟ್ಟಿಗೆ ಸಿಲ್ವರ್ ಸ್ಟಾರ್ ಪ್ರಶಸ್ತಿ ಲಭಿಸಿರುವುದನ್ನು ಸ್ಮರಿಸಬಹುದು.
ಶಾರೂಕ್ ಖಾನ್ ಪ್ರತಿಭಾನ್ವಿತ ನಟ ಹಾಗೂ ಜನಪ್ರಿಯ ವ್ಯಕ್ತಿಯಾಗಿರುವುದನ್ನು ಗಮನಿಸಿ ಫ್ರೆಂಚ್ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂಬುದಾಗಿ ಅಲ್ಲಿನ ರಾಯಭಾರಿ ಜೆರಾರ್ಡ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಇನ್ನಷ್ಟೇ ನಿಗದ ಪಡಿಸಬೇಕಿದೆ. ಈ ಮೊದಲು ಪ್ರಸ್ತುತ ಪ್ರಶಸ್ತಿ ಪಡೆದ ಭಾರತೀಯರೆಂದರೆ ಕಲಾವಿದ ಎಸ್ ಎಚ್ ರಾಝಾ ಹಾಗೂ ಸಾಹಿತಿ ಮಹಾಶ್ವೇತಾ ದೇವಿ ಇವರಾಗಿದ್ದಾರೆ