Article Bollywood Gossips %e0%b2%b6%e0%b2%be%e0%b2%b0%e0%b3%81%e0%b2%96%e0%b3%8d%e2%80%8c%e0%b2%97%e0%b3%86 %e0%b2%ac%e0%b3%86%e0%b2%a6%e0%b2%b0%e0%b2%bf%e0%b2%95%e0%b3%86 %e0%b2%95%e0%b2%b0%e0%b3%86 107121200011_1.htm

Select Your Language

Notifications

webdunia
webdunia
webdunia
webdunia

ಶಾರುಖ್‌ಗೆ ಬೆದರಿಕೆ ಕರೆ

ಶಾರುಖ್‌
IFM
ಇತ್ತೀಚಿನ ಬ್ಲಾಕ್‍‌ಬಸ್ಟರ್ ಓಂ ಶಾಂತಿ ಓಂ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಪ್ರಖ್ಯಾತಿಯನ್ನು ತಂದಿದ್ದು ಆದರೆ ಅದರೊಂದಿಗೆ ಪರೋಕ್ಷ ಪರಿಣಾವನ್ನು ಕೂಡ ಉಂಟುಮಾಡಿದೆ. ಗ್ಯಾಂಗ್ಸ್ಟರ್ ಬಂಟೀ ಪ್ಯಾಂಡಿ ಅವರಿಂದ ಖಾನ್‌ಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅಬು ಸಲೇಂ ಮಾಡಿದ್ದ ರೀತಿಯಲ್ಲಿ ಇವರೂ ಕೂಡಾ ಹಣದ ಬೇಡಿಕೆಯೊಡ್ಡುತ್ತಿದ್ದಾರೆ.

ಎರಡು ಕೋಟಿ ರೂ.ಹಣವನ್ನು ನೀಡುವಂತೆ ಶಾರುಖ್ ಅವರಿಗೆ ಗ್ಯಾಂಗ್ಸ್ಟರ್‌ನಿಂದ ನಿರಂತರ ಕರೆಗಳು ಬಂದಿದ್ದು, ಈ ವಿಷಯವನ್ನು ಶಾರುಖ್ ಮುಂಬಯಿ ಪೊಲೀಸ್ ಮತ್ತು ಅದರ ಭಯೋತ್ಪಾದನ ವಿರೋಧಿ ಸ್ಕ್ವಾಡ್‌ಗಳಿಗೆ ತಿಳಿಸಿದ್ದಾರೆ.

ಕ್ರೈಮ್ ಖಾತೆ ಮತ್ತು ಎಟಿಎಸ್ ತಂಡಗಳು ಗ್ಯಾಂಗ್ಸ್ಟರ್ಸ್‌ಗಳ ಜಾಡನ್ನು ಕಂಡುಹಿಡಿಯುತ್ತಿದ್ದು, ಈ ಕಾರ್ಯದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡುಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರ ನಿವಾಸ 'ಮನ್ನತ್'ಗೆ ಬಿಗಿಭದ್ರತೆ ಒದಗಿಸಲಾಗಿದೆ.

ಈ ಕುರಿತ ಯಾವುದೇ ಪ್ರತಿಕ್ರಿಯೆಗೆ ಶಾರುಖ್ ದೊರಕುತ್ತಿಲ್ಲ. ಈ ಘಟನೆಯ ಬಗ್ಗೆ ಶಾರುಖ್ ಕಾರ್ಯದರ್ಶಿಯವರು ಕೂಡ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಅಲ್ಲದೆ ಹಿರಿಯ ಅಧಿಕಾರಿಗಳು ಕೂಡಾ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.

ಬಂಟೀ ಪ್ಯಾಂಡಿ ಈ ಮೊದಲು ಚೋಟಾ ರಾಜನ್ ತಂಡದೊಂದಿಗೆ ಇದ್ದು, ನಂತರ ಭಾರತ್ ನೇಪಾಳಿ ಮತ್ತು ಅಜಯ್ ಮೋಹಿತ್ ಅವರೊಂದಿಗೆ ತನ್ನ ಸ್ವಂತ ತಂಡವನ್ನು ನಿರ್ಮಿಸಿಕೊಂಡಿದ್ದಾನೆ.

ಶಾರುಖ್ ಖಾನ್ ಅವರಿಗೆ ಭೂಗತ ಲೋಕದಿಂದ ಕರೆಗಳು ಬರುತ್ತಿರುವುದು ಇದು ಮೊದಲೇನಲ್ಲ. ಈ ಮೊದಲು 'ದಿಲ್ ತೋ ಪಾಗಲ್ ಹೈ' ಚಿತ್ರದ ಚಿತ್ರೀಕರಣದ ನಂತರ ತನ್ನ ನಿರ್ಮಾಣದ ಚಿತ್ರದಲ್ಲಿ ನಟಿಸುವಂತೆ ಅಬು ಸಲೇಂನಿಂದ ಶಾರುಖ್ ಅವರಿಗೆ ಕರೆಗಳು ಬಂದಿದ್ದವು. ಆದರೆ ಶಾರುಖ್ ಅದನ್ನು ನಿರಾಕರಿಸಿದ್ದರು.

Share this Story:

Follow Webdunia kannada