Publish Date: Fri, 16 Nov 2007 (12:46 IST)
Updated Date: Fri, 16 Nov 2007 (12:44 IST)
ನಿರ್ದೇಶಕ ಫರಾ ಖಾನ್ ಅವರ ಓಂ ಶಾಂತಿ ಓಂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರೆ, ಒಬ್ಬರು ಮಾತ್ರ ಈ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿಲ್ಲ.
ನನ್ನನ್ನು ಅಪಹಾಸ್ಯ ಮತ್ತು ಅವಮಾನ ಮಾಡಲು ಪಿತೂರಿ ನಡೆಸಿದ್ದಾರೆ ಎಂಬ ಆರೋಪದ ಮೇರೆ ಹಿರಿಯ ನಟ ಮನೋಜ್ ಕುಮಾರ್ ಚಿತ್ರನಿರ್ಮಾಪಕ ಮತ್ತು ನಟ ಶಾರುಖ್ ಖಾನ್ ಹಾಗೂ ಫರಾ ಖಾನ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.
ಚಿತ್ರಮಂದಿರದ ಹೊರಗೆ ಪೊಲೀಸರಿಂದ ಒದೆ ತಿನ್ನುವ ಓಂ ಶಾಂತಿ ಓಂನ ದೃಶ್ಯವು ತನ್ನ ಯೌವನದ ಪ್ರತಿರೂಪವನ್ನು ತೋರಿಸುತ್ತದೆ ಎಂದು ಚಲನಚಿತ್ರದಲ್ಲಿ ದೇಶಭಕ್ತಿಯ ಬಗ್ಗೆ ನೂತನ ವ್ಯಾಖ್ಯಾನ ನೀಡಿರುವ ನಟ ಹೇಳಿದ್ದಾರೆ.
ಇನ್ನೊಂದು ದೃಶ್ಯದಲ್ಲಿ ಶಾರುಖ್ ಖಾನ್, ತಾನು ಮನೋಜ್ ಕುಮಾರ್ ಎಂದು ಹೇಳುತ್ತಾ, ಕುಡಿದ ಸ್ಥಿತಿಯಲ್ಲಿ ನಕಲಿ ಧನ್ಯವಾದ ಭಾಷಣವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಭರತ್ ಕುಮಾರ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಪ್ರಖ್ಯಾತ ನಟ, ಇದು ಚಿತ್ರ ನಿರ್ಮಾಣದ ರೀತಿಯಲ್ಲ ಎಂಬುದಾಗಿ ನಿರ್ದೇಶಕ ಫರಾ ಖಾನ್ ಅವರನ್ನು ಜರಿದಿದ್ದಾರೆ.
ಮೈ ಹೂ ನಾ ಚಿತ್ರದ ನಂತರ ಓಂ ಶಾಂತಿ ಓಂ ಫರಾ ಖಾನ್ ಅವರ ಎರಡನೇ ನಿರ್ದೇಶಿತ ಚಿತ್ರವಾಗಿದ್ದು, ನವೆಂಬರ್ 9ರಂದು ದೇಶದಾದ್ಯಂತ ಬಿಡುಗಡೆಗೊಂಡಿತ್ತು.