Publish Date: Fri, 03 Oct 2008 (16:24 IST)
Updated Date: Fri, 03 Oct 2008 (16:23 IST)
ತನ್ನ ಮತ್ತು ಅಮಿತಾಬ್ ಬಚ್ಚನ್ ನಡುವಿನ ಶೀತಲ ಸಮರದ ವರದಿಗಳನ್ನು ಬದಿಗಿರಿಸಿ ಸೂಪರ್ ಸ್ಟಾರ್ ಶಾರುಖ್ ಖಾನ್, ಅಭಿಷೇಕ್ ಬಚ್ಚನ್‌ರ ದ್ರೋಣ ಚಿತ್ರದ ಪ್ರೀಮಿಯರ್‌ನಲ್ಲಿ ಭಾಗವಹಿಸಿದರು.
"ನನ್ನ ಮತ್ತು ಮಿ. ಬಚ್ಚನ್‌ರ ನಡುವಿನ ಎಲ್ಲಾ ಕಲಹಗಳು ಮಾಧ್ಯಮ ನಿರ್ಮಿತ ಮತ್ತು ನಮ್ಮಿಬ್ಬರ ನಡುವೆ ಯಾವುದೇ ರೀತಿಯ ವಿರಸಗಳಿಲ್ಲ" ಎಂದು ಶಾರುಖ್ ಸುದ್ದಿಗಾರರಿಗೆ ತಿಳಿಸಿದರು.
ತನ್ನ ಪತ್ನಿ ಗೌರಿಯೊಂದಿಗೆ ಪ್ರೀಮಿಯರ್‌ಗೆ ಆಗಮಿಸಿದ ಕಿಂಗ್ ಖಾನ್ ಅಭಿಷೇಕ್‌ರನ್ನು ಅಲಂಗಿಸಿ ಚಿತ್ರಕ್ಕೆ ಯಶಸ್ಸು ಕೋರಿದರು.
"ನಾನು ಈ ಚಿತ್ರದಲ್ಲಿ ಅಭಿಷೇಕ್‌ರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ. ಅವರು ಚಿತ್ರಕ್ಕಾಗಿ ಬಹಳ ಪರಿಶ್ರಮ ಪಟ್ಟಿದ್ದಾರೆ ಮತ್ತು ನಾನು ಅವರಿಗೆ ಯಶ ಕೋರುತ್ತೇನೆ" ಎಂದು ಶಾರುಖ್ ಹೇಳಿದರು.
ಬಚ್ಚನ್ ಪರಿವಾರದ ಹೊರತಾಗಿ, ಅನಿಲ್ ಅಂಬಾನಿ, ಮತ್ತು ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಮುಂತಾದ ಗಣ್ಯರು ದ್ರೋಣ ಚಿತ್ರದ ಪ್ರೀಮಿಯರ್‌ನಲ್ಲಿ ಪಾಲ್ಗೊಂಡರು.
ಬಾಲಿವುಡ್‌ನ ಯಶ್ ಚೋಪ್ರಾ, ಕರಣ್ ಜೋಹರ್, ರಾಕೇಶ್ ರೋಶನ್, ಓಂ ಪ್ರಕಾಶ್ ಮೆಹ್ರಾ, ಫರಾನ್ ಅಖ್ತರ್, ಅಶುತೋಷ್ ಗೋವಿತ್ರಿಕರ್, ಶಾಹಿದ್ ಕಪೂರ್, ಸುಶ್ಮಿತಾ ಸೇನ್, ಫರಾ ಖಾನ್, ಹರ್‌ಮಾನ್ ಬೆವಜಾ, ಕುನಾಲ್ ಕಪೂರ್ ಮತ್ತು ಶಾಜಿದ್ ಕಪೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.