Article Bollywood Gossips %e0%b2%b6%e0%b2%be%e0%b2%b0%e0%b3%81%e0%b2%96%e0%b3%8d %e0%b2%ac%e0%b2%97%e0%b3%8d%e0%b2%97%e0%b3%86 %e0%b2%b9%e0%b3%81%e0%b2%b6%e0%b2%be%e0%b2%b0%e0%b2%be%e0%b2%97%e0%b2%bf%e0%b2%b0%e0%b2%bf 108122700023_1.htm

Select Your Language

Notifications

webdunia
webdunia
webdunia
webdunia

ಶಾರುಖ್ ಬಗ್ಗೆ ಹುಶಾರಾಗಿರಿ...

ಶಾರುಖ್ ಖಾನ್
IFM
ಶಾರುಖ್ ಖಾನ್ ಪರದೆಯ ಮೇಲೆ ಎಂತಹುದೇ ಪಾತ್ರ ನಿರ್ವಹಿಸಿರಲಿ ಆದರೆ ನಿಜಜೀವನದಲ್ಲಿ ಆದರ್ಶ ಪತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ದಶಕಗಳಿಂದ ಬಾಲಿವುಡ್ ಕಿಂಗ್ ಎನಿಸಿಕೊಂಡಿರುವ ಅವರು ಬಹಳಷ್ಟು ನಟಿಯರೊಂದಿಗೆ ನಟಿಸಿದ್ದಾರೆ. ಆದರೆ ಯಾರೊಂದಿಗೂ ಅವರ ಹೆಸರು ತಳುಕು ಹಾಕಿಕೊಳ್ಳಲಿಲ್ಲ ಅಥವಾ ಪ್ರೇಮಕಥೆಗಳು ಚರ್ಚೆಗೆ ಬರಲಿಲ್ಲ. ಆದರೆ ಹಲವು ಚಿತ್ರಗಳಲ್ಲಿ ಶಾರುಖ್, ಸದಾ ಪರಸ್ತ್ರೀಯರ ಮೇಲೆಯೇ ಕಣ್ಣುಹಾಕುವ ಲಂಪಟನ ಪಾತ್ರದಲ್ಲಿ ನಟಿಸಿದ್ದಿದೆ.

ಮೊದಲಿನಿಂದ ಆರಂಭಿಸುವುದಾದರೆ 'ಡರ್' ಚಿತ್ರದಲ್ಲಿ ಜೂಹಿ ಚಾವ್ಲ, ಸನ್ನಿ ಡಿಯೋಲ್‌ರ ಪತ್ನಿಯಾಗಿರುತ್ತಾರೆ, ಶಾರುಖ್ ಜೂಹಿಯನ್ನು ಇಷ್ಟಪಡತೊಡಗುತ್ತಾರೆ. ಚಿತ್ರದ ಅಂತ್ಯದಲ್ಲಿ ಅವರಿಗೆ ಇದಕ್ಕಾಗಿ ಶಿಕ್ಷೆಯೂ ಸಿಗುತ್ತದೆ ಆದರೆ ಇದರಿಂದ ಶಾರುಖ್ ಮುಂದಿನ ಚಿತ್ರಗಳಿಗೆ ಪಾಠ ಕಲಿಯುವುದಿಲ್ಲ. 'ಅಂಜಾಮ್' ಚಿತ್ರದಲ್ಲಿ ನಾಯಕಿ ಮಾಧುರಿ ದೀಕ್ಷಿತ್ ಅವರ ಭಾವೀಪತಿ ದೀಪಕ್ ತಿಜೋರಿ ಅವರನ್ನು ಮಾಧುರಿಯನ್ನು ಪಡೆಯುದಕ್ಕೋಸ್ಕರ್ ಶಾರುಖ್ ಆಕ್ಸಿಡೆಂಟ್‌ನಲ್ಲಿ ಕೊಲ್ಲಲು ಪ್ರಯತ್ನಿಸುತ್ತಾರೆ ಅಲ್ಲಿ ಅವರ ಉದ್ದೇಶ ಪೂರ್ಣವಾಗದಿದ್ದಾಗ ಆಸ್ಪತ್ರೆಯಲ್ಲಿ ಬಂದು ಕೊಲೆ ಮಾಡಿ ನಂತರ ಮಾಧುರಿಯ ಕಡೆ ತೆರಳುತ್ತಾರೆ. 'ಮಾಯಾ ಮೆಮ್‌ಸಾಬ್' ಚಿತ್ರದ ವಿವಾಹಿತ ನಾಯಕಿಯ ದಿವಾನಾಗಳಲ್ಲಿ ಶಾರುಖ್ ಕೂಡ ಒಬ್ಬರು.

'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ, ಮೊದಲು ತಮ್ಮನ್ನೆ ಪ್ರೀತಿಸುತ್ತಿರುವ ಕಾಜೋಲ್‌ರನ್ನು ಬಿಟ್ಟು ರಾಣಿಯನ್ನು ವರಿಸುವ ಶಾರುಖ್, ಕಾಜೋಲ್‌ರ ವಿವಾಹ ನಿಶ್ಚಿತಾರ್ಥ ಸಲ್ಮಾನ್ ಖಾನ್‌ರೊಂದಿಗೆ ಆದಾಗ ಕಾಜೋಲ್‌ರನ್ನು ತಮ್ಮವರನ್ನಾಗಿಸಿಕೊಳ್ಳಲು ಬರುತ್ತಾರೆ. 'ದಿಲ್‌ವಾಲೇ ದುಲ್ಙನಿಯಾ ಲೇ ಜಾಯೇಂಗೇ' ಚಿತ್ರದಲ್ಲೂ ಬೇರಾರದೊ ಮದುವೆ ಮಂಟಪದಿಂದ ಶಾರುಖ್ ನಾಯಕಿ ಕಾಜೋಲ್‌ರನ್ನು ಓಡಿಸಿಕೊಂಡು ಕರೆದೊಯ್ಯುತ್ತಾರೆ. 'ಪರದೇಸ್' ಚಿತ್ರದಲ್ಲೂ ಶಾರುಖ್ ಮಾಡುವುದು ಇದನ್ನೆ.

'ದಿವಾನ' ಚಿತ್ರದಲ್ಲಿ ಶಾರುಖ್ ಕಣ್ಣು ಬೀಳುವುದು ರಿಷಿ ಕಪೂರ್ ಪತ್ನಿಯಾಗಿರುವ ದಿವ್ಯಾ ಭಾರತಿ ಅವರ ಮೇಲೆ. 'ದಿಲ್ ತೊ ಪಾಗಲ್ ಹೈ' ಚಿತ್ರದಲ್ಲಿ ಮಾಧುರಿ ದೀಕ್ಷಿತ್‌ರ ವಿವಾಹ ಅಕ್ಷಯ್ ಕುಮಾರ್‌ರೊಂದಿಗೆ ನಿಶ್ಚಿತವಾಗಿರುತ್ತದೆ, ಆದರೆ ಶಾರುಖ್ ತಮ್ಮನ್ನು ಕಂಡರೆ ಪ್ರಾಣಬಿಡುವ ಕರೀಶ್ಮಾರನ್ನು ಬಿಟ್ಟು ಮಾಧುರಿಯನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ. 'ಕಬಿ ಅಲ್‌ವಿದಾ ನಾ ಕೆಹನಾ' ಚಿತ್ರದಲ್ಲಿ ಶಾರುಖ್ ಪತ್ನಿ ಪ್ರೀತಿ ಜಿಂಟಾ ಆದರೆ ಅವರು ಬಯಸುವುದು ಅಭಿಷೇಕ್ ಬಚ್ಚನ್ ಪತ್ನಿಯಾಗಿರುವ ರಾಣಿ ಮುಖರ್ಜಿ ಅವರನ್ನು. ಯಾವಾಗ ನೋಡಿದರೂ ಶಾರುಖ್ ಕಣ್ಣು ಬೇರೆಯವರ ಪತ್ನಿ, ಪ್ರಿಯೆಯರ ಮೇಲೆಯೇ ಇರುತ್ತದೆ, ಅಲ್ಲವೇ...

ಅಭ್ಯಾಸ ಬಲ ಸುಲಭವಾಗಿ ಬಿಡುವುದಿಲ್ಲ ಎನ್ನುತ್ತಾರೆ. 'ರಬ್ನೆ ಬನಾ ದಿ ಜೋಡಿ' ಚಿತ್ರದಲ್ಲಿ ಆದಿತ್ಯ ಚೋಪ್ರಾ ಆರಂಭದಲ್ಲೇ ಶಾರುಖ್‌ಗೆ ಮದುವೆ ಮಾಡಿ ನಾಯಕಿಯನ್ನೂ ಒಪ್ಪಿಸಿ ಬಿಡುತ್ತಾರೆ. ಆದರೆ ಶಾರುಖ್ ನೆಟ್ಟಗೆ ಪ್ರೀತಿ, ಮದುವೆ ಮಾಡಿಕೊಂಡರೆ ಏನು ಚೆನ್ನಾಗಿರುತ್ತದೆ, ಆದ್ದರಿಂದ ಅವರು ಮೀಸೆ ಗೀಸಿಕೊಂಡು ತಮ್ಮದೇ ಪತ್ನಿಯನ್ನು ಲಪಾಟಾಯಿಸಿ ಅವರ ಪ್ರೇಮಿಯಾಗುತ್ತಾರೆ. ಶಾರುಖ್ ಮೇಲೆ ಕೋಪವೇನು ಇಲ್ಲ ಬಿಡಿ, ಆದರೆ ಶಾರುಖ್ ನೀತಿ ಪಾಲಿಸುವವರಿದ್ದರೆ ಹುಶಾರಾಗಿರುವುದೊಳಿತು !

webdunia
IFM

Share this Story:

Follow Webdunia kannada